ಶಿವಮೊಗ್ಗ ತಹಶೀಲ್ದಾರ್‌ ವರ್ಗಾವಣೆ, ಅನುಮಾನ ಮೂಡಿಸಿದ ನಡೆ

SHIMOGA NEWS, 15 NOVEMBER 2024 : ಶಿವಮೊಗ್ಗ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಅವರ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಹಶೀಲ್ದಾರ್‌ ವಿ.ಎಸ್‌.ರಾಜೀವ್‌ ಅವರನ್ನು ವರ್ಗಾಯಿಸಲಾಗಿದೆ (Transfer).➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತಹಶೀಲ್ದಾರ್‌ ಬಿ.ಎನ್.‌ಗಿರೀಶ್‌ ಅವರನ್ನು ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ತಹಶೀಲ್ದಾರ್‌ ಗ್ರೇಡ್‌ 1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭ ಚುನಾವಣೆ ಕರ್ತವ್ಯ ನಿರ್ವಹಿಸಲು ಬಿ.ಎನ್.ಗಿರೀಶ್‌ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿವಮೊಗ್ಗಕ್ಕೆ ವರ್ಗಾಯಿಸಲಾಗಿತ್ತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Thahasilhdar-Girish

ಚುನಾವಣೆ ಎರಡು ದಿನ ಮುನ್ನ ವರ್ಗ

ಆಡಳಿತಾತ್ಮಕ ಹಿತದೃಷ್ಟಿಯಿಂದ ತಹಶೀಲ್ದಾರ್‌ ಎಸ್‌.ವಿ.ಗಿರೀಶ್‌ ಅವರನ್ನು ವರ್ಗಾಯಿಸಲಾಗುತ್ತಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇನ್ನೊಂದೆಡೆ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಕಂದಾಯ ಇಲಾಖೆಯಿಂದ ತಹಶೀಲ್ದಾರ್‌ ಎಸ್‌.ವಿ.ಗಿರೀಶ್‌ ಸ್ಪರ್ಧಿಸಿದ್ದರು. ಶನಿವಾರ ಮತದಾನ ನಡೆಯಲಿದೆ. ಎರಡು ದಿನ ಮೊದಲು ಅವರ ವರ್ಗಾವಣೆಯಾಗಿರುವುದು ಗಿರೀಶ್‌ ಅವರ ಬಣದಲ್ಲಿ ಅನುಮಾನ ಮೂಡಿಸಿದೆ.

ಇದನ್ನೂ ಓದಿ » ‘ಇದನ್ನೆಲ್ಲ ಬಿಟ್ಟು, ರಾಜ್ಯದ ಸಚಿವರುಗಳು ಶಬರಿಮಲೈಗೆ ಹೋಗಿ ಭಿಕ್ಷೆ ಬೇಡಲಿʼ

Leave a Comment