ದಿನ ಭವಿಷ್ಯ | 22 ನವೆಂಬರ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 22 NOVEMBER 2024 

ಮೇಷ : ದೀರ್ಘ ಪ್ರಯಾಣ ಸಂಭವ. ಹಣಕಾಸು ಹೂಡಿಕೆಯತ್ತ ಗಮನ ಕೊಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಗೌರವ ಸಿಗುತ್ತಿಲ್ಲ. ಗಟ್ಟಿಯಾಗಿ ಮಾತನಾಡಿದರಷ್ಟೆ ನಿಮ್ಮ ಕೆಲಸಕ್ಕೆ ಗೌರವ ಲಭಿಸಲಿದೆ.

ವೃಷಭ : ಆರೋಗ್ಯ ಕುರಿತು ಗಮನ ವಹಿಸಿ. ಜೀವನ ಶೈಲಿ ಬದಲಾಯಿಸಿಕೊಳ್ಳುವತ್ತ ಗಂಭೀರ ಚಿಂತನೆ. ಹೆಚ್ಚು ಪ್ರಸನ್ನರಾಗಿರುತ್ತೀರ. ಕೆಲಸ ಕಾರ್ಯಗಳು ಸುಲಭವಾಗಿ ಸಾಗಲಿವೆ.

ಮಿಥುನ : ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಒತ್ತಡದ ದಿನದ ಕಾರಣಕ್ಕೆ ಕುಟುಂಬದವರ ಮೇಲೆ ಸಿಡುಕು. ಸಾಲಗಾರರ ಕಾಟ. ಸಾಲ ತೀರಿಸುವ ಅವಕಾಶ. ಹಣಕಾಸು ವಿಚಾರದಲ್ಲಿ ತುಸು ನೆಮ್ಮದಿ.

ಕರ್ಕಾಟಕ : ನೀವು ಇಷ್ಟಪಡುವ ತಾಣವೊಂದಕ್ಕೆ ಪ್ರವಾಸ ಕೈಗೊಳ್ಳಲು ಯೋಜನೆ ಸಿದ್ದಪಡಿಸಿಕೊಳ್ಳುತ್ತೀರಿ. ಈ ದಿನ ಯಾರಿಗು ಕೈ ಸಾಲ ಕೊಡಬೇಡಿ. ಸಂಗಾತಿಗೆ ವಿಶೇಷ ಉಡುಗೊರೆ ನೀಡಿ, ಖುಷಿಪಡಿಸಿ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ.

ಸಿಂಹ : ಕೆಲಸದ ಕುರಿತು ನಿಮ್ಮ ದೃಷ್ಟಿಕೋನ ಬದಲಿಸಿಕೊಂಡರೆ ಆದಾಯ ಹೆಚ್ಚಲಿದೆ. ಒಂಟಿತನ ಕಾಡಲಿದೆ. ವಾರಾಂತ್ಯದ ಪ್ರಯಾಣಕ್ಕೆ ಸಜ್ಜಾಗಿ. ಹಣ ಖರ್ಚು ಮಾಡುವಾಗ ಎಚ್ಚರವಿರಲಿ.

DINA-BHAVISHYA

ಕನ್ಯಾ : ಕೆಲಸ, ಸ್ನೇಹಿತರು, ಕುಟುಂಬಕ್ಕೆ ಸಮಯ ಹೊಂದಾಣಿಕೆ ಕಷ್ಟವಾಗಲಿದೆ. ಕಚೇರಿಯಲ್ಲಿನ ಸಣ್ಣ ತಪ್ಪು ನಿಮ್ಮ ಉದ್ಯೋಗದ ಮೇಲೆ ಪ್ರಭಾವ ಬೀರಲಿದೆ. ಪ್ರತಿ ಕ್ಷಣವನ್ನು ಆನಂದಿಸಿ. ಹೊಸ ವ್ಯಕ್ತಿಗಳ ಪರಿಚಯ ಸಾಧ್ಯತೆ.

ತುಲಾ : ಚರ್ಮ ಸಂಬಂಧಿ ಸಮಸ್ಯೆ ಉಂಟಾಗಲಿದೆ. ಬಾಜಿ ಕಟ್ಟುವುದರಿಂದ ಹಣ ನಷ್ಟವಾಗಲಿದೆ. ಪ್ರವಾಸ ಕೈಗೊಳ್ಳುವ ಉದ್ದೇಶ ಹೊಂದಿದ್ದರೆ ಈಗಲೆ ಯೋಜನೆ ಸಿದ್ಧಪಡಿಸಿಕೊಳ್ಳಿ. ಇದರಿಂದ ಖರ್ಚು ಕಡಿಮೆಯಾಗಲಿದೆ.

ವೃಶ್ಚಿಕ : ಅನಿರೀಕ್ಷಿತವಾಗಿ ಹಣ ಕೈ ಸೇರಲಿದೆ. ಒಂಟಿತನದ ಅಪೇಕ್ಷೆ. ವ್ಯಾಪಾರ, ವ್ಯವಹಾರ ಮಾಡುತ್ತಿರುವವರಿಗೆ ಲಾಭವಾಗಲಿದೆ. ವ್ಯಾಯಾಮದಿಂದ ದೇಹದ ಆರೋಗ್ಯ ಸುಧಾರಣೆ.

ಧನು : ಹೊಸಬರ ಪರಿಚಯದಿಂದ ವ್ಯಾಪಾರ, ವ್ಯವಹಾರಕ್ಕೆ ಅನುಕೂಲ. ಮಾತಿಗೆ ಮರಳಾಗದೆ ಸತ್ಯಾಸತ್ಯತೆ ಪರಿಶೀಲಿಸಿ ಒಪ್ಪಂದಗಳಿಗೆ ಮುಂದಾಗಿ. ಮಕ್ಕಳೊಂದಿಗೆ ಕಿರು ಪ್ರವಾಸ ಸಾಧ್ಯತೆ.

ಮಕರ : ಪತಿ ಅಥವಾ ಪತ್ನಿ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ. ವಿಶ್ರಾಂತಿಯ ಅಗತ್ಯವಿದೆ. ಆರೋಗ್ಯದ ಕಡಗೆ ಗಮನ ವಹಿಸಿ.

ಕುಂಭ : ತುರ್ತು ಹಣಕ್ಕಾಗಿ ಸ್ನೇಹಿತರೊಬ್ಬರಿಂದ ಬೇಡಿಕೆ. ನಂಬಕೆಗೆ ಅರ್ಹವಾಗಿದ್ದರಷ್ಟೆ ಹಣ ಕೊಡುವುದು ಸೂಕ್ತ. ತಣ್ಣನೆ ಆಹಾರ ಸೇವನೆ ಬೇಡ. ನಿಮ್ಮ ಕುರಿತು ನೀವು ಹೆಚ್ಚು ಯೋಚಿಸುವುದು ಒಳಿತು.

ಮೀನ : ಸಂಗಾತಿಯೊಂದಿಗೆ ಸುಳ್ಳು ಹೇಳಬೇಡಿ. ನಿಮ್ಮ ಸಾಧನೆಯಲ್ಲಿ ಸಹೋದ್ಯೋಗಿಗಳ ಪಾಲುದಾರರಾಗಲು ಮುಂದಾಗುತ್ತಾರೆ. ಅವಕಾಶ ಕೊಡಬೇಡಿ. ಭುಜಕ್ಕೆ ಪೆಟ್ಟು ಬೀಳುವ ಸಾಧ್ಯತೆ. ಎಚ್ಚರದಿಂದಿರಿ.

ಇದನ್ನೂ ಓದಿ » ಇಂದಿನಿಂದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಆರಂಭ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment