ಶಿವಮೊಗ್ಗ ಲೈವ್
STATE NEWS : ರಾಜ್ಯದಲ್ಲಿ 13,87,652 ಬಿಪಿಎಲ್ ಕಾರ್ಡುಗಳು (BPL Card) ಅನರ್ಹ ಎಂದು ಗುರುತಿಸಲಾಗಿದೆ. ಈ ಪೈಕಿ 4036 ಸರ್ಕಾರಿ ನೌಕರರು ಹೊಂದಿರುವ ಕಾರ್ಡುಗಳಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅನರ್ಹಗೊಂಡಿರುವ ಕಾರ್ಡುಗಳ ಪೈಕಿ 1.20 ಲಕ್ಷ ರೂ.ಗಿಂತಲು ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಕಾರ್ಡುಗಳ ಸಂಖ್ಯೆ 10,09,476. ಆದಾಯ ತೆರಿಗೆ ಪಾವತಿಸುವವರು ಕಾರ್ಡುಗಳ ಸಂಖ್ಯೆ 98,473. ಆರು ತಿಂಗಳಿಂದ ಪಡಿತರವನ್ನು ಪಡೆಯದೆ ಅನರ್ಹಗೊಂಡಿರುವ ಕಾರ್ಡುಗಳ ಸಂಖ್ಯೆ 2,75,667 ಎಂದು ತಿಳಿಸಲಾಗಿದೆ.

ಇದನ್ನೂ ಓದಿ » ಇಂದಿನಿಂದ ಬಾರ್ಡರ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಆರಂಭ
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
1,59,319 ಸದಸ್ಯರು ಮೃತಪಟ್ಟ ಹಿನ್ನೆಲೆ ಅವರ ಹೆಸರನ್ನು ಕಾರ್ಡುಗಳಿಂದ ತೆಗೆದು ಹಾಕಲಾಗಿದೆ. ಅಮಾನತು, ರದ್ದು ಮತ್ತು ಎಪಿಎಲ್ ಕಾರ್ಡುಗಳಾಗಿ ಬದಲಾದ ಒಟ್ಟು ಕಾರ್ಡುಗಳ ಸಂಖ್ಯೆ 3,81,983 ಎಂದು ಆಹಾರ ಇಲಾಖೆ ತಿಳಿಸಿದೆ.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
