ರಾತ್ರೋರಾತ್ರಿ ಮನೆ ಮುಂದೆ ಮಾಟ, ಮಂತ್ರ, ಎಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 5 DECEMBER 2024

ಭದ್ರಾವತಿ : ಮನೆಯೊಂದರ ಮುಂಭಾಗ ಕಿಡಿಗೇಡಿಗಳು ವಾಮಾಚಾರ (Black Magic) ನಡೆಸಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಅಂತರಗಂಗೆ ಗ್ರಾಪಂ ವ್ಯಾಪ್ತಿ ರತ್ನಾಪುರ ಗ್ರಾಮದ ಮಂಜ ಎಂಬುವರ ಮನೆ ಮುಂದೆ ಮಾಟಮಂತ್ರ ಮಾಡಲಾಗಿದೆ.

ಮಂಜ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆಂದು ಹೊರಜಿಲ್ಲೆಗೆ ಹೋಗಿದ್ದರು. ಮನೆಯಲ್ಲಿ ಮಕ್ಕಳಿಬ್ಬರು ಇದ್ದು, ಮಧ್ಯರಾತ್ರಿ ಅರಿಶಿಣ, ಕುಂಕುಮ ಸಹಿತ ಪೂಜೆ ಮಾಡಲಾಗಿದೆ. ಸ್ಥಳದಲ್ಲಿ ಮೊಟ್ಟೆಗಳು, ಮೀನುಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು, ಅರಿಶಿಣ, ಕುಂಕುಮ, ಲಿಂಬೆಹಣ್ಣು ಸೇರಿ ಮತ್ತಿತರ ಪೂಜಾ ಸಾಮಗ್ರಿ ಪತ್ತೆಯಾಗಿವೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಸುದ್ದಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment