ಶಿವಮೊಗ್ಗ LIVE
SHIVAMOGGA LIVE NEWS, 6 DECEMBER 2024
ಭದ್ರಾವತಿ : ಮದ್ಯ ಸೇವಿಸಿ ವಿದ್ಯುತ್ ದೀಪಗಳ ವಯರ್ ತುಂಡು ಮಾಡಿ, ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದ ವ್ಯಕ್ತಿಗೆ ಬುದ್ದಿ ಹೇಳಿದ ನಗರಸಭೆ ಮಾಜಿ ಸದಸ್ಯನ (Member) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಘಟನೆಯಾಗಿದೆ.
ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್ ತಲೆಗೆ ಮಚ್ಚಿನೇಟು ಬಿದ್ದಿದೆ. ರಾತ್ರಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ವಿದ್ಯುತ್ ದೀಪಗಳ ವಯರ್ ತುಂಡು ಮಾಡುತ್ತಿದ್ದ. ಆಗ ಅನಿಲ್ ಕುಮಾರ್ ಅವರು ಆತನಿಗೆ ಬುದ್ದಿ ಹೇಳಿ ಕಳುಹಿಸಿದ್ದರು. ಮರುದಿನ ಬೆಳಗ್ಗೆ ಅನಿಲ್ ಕುಮಾರ್ ಮನೆ ಬಳಿ ಬಂದು ಮಚ್ಚು ಬೀಸಿದ್ದಾನೆ. ಅದು ಅನಿಲ್ ಕುಮಾರ್ ತಲೆಗೆ ತಗುಲಿ ಗಾಯಗೊಂಡಿದ್ದಾರೆ. ಕೂಡಲೆ ಅನಿಲ್ ಕುಮಾರ್ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಹೊಸ ಪೊಲೀಸ್ ಠಾಣೆ, ಯಾವುದು? ಎಷ್ಟು ಸಿಬ್ಬಂದಿ ಇರ್ತಾರೆ?
LATEST NEWS
- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

- ಶಿವಮೊಗ್ಗದ ಈ ರಸ್ತೆಯಲ್ಲಿ ಜಾರಿ ಬಿದ್ದ ಸಾಲು ಸಾಲು ಬೈಕುಗಳು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






