ಜನಶತಾಬ್ದಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು | ಆಗುಂಬೆ ಬಳಿ ಕಾರು ಅಪಘಾತ – ಫಟಾಫಟ್‌ ಸುದ್ದಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS, 22 DECEMBER 2024

Jan Shatabdi

ಟಿವಿ ರಿಮೋಟ್‌ಗಾಗಿ ವಿಷ ಸೇವಿಸಿದ ಬಾಲಕಿ

FATAFAT-NEWS-1ಶಿವಮೊಗ್ಗ : ಬೈಪಾಸ್ ರಸ್ತೆ ಸಮೀಪದ ಸೂಳೆಬೈಲ್‌ನಲ್ಲಿ ಟಿವಿ ರಿಮೋಟ್ ಸಿಗಲಿಲ್ಲವೆಂಬ ಕಾರಣಕ್ಕೆ 16 ವರ್ಷದ ಬಾಲಕಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿ ಸಹನಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮನೆಯಲ್ಲಿ ರಿಮೋಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಾಲಕಿ ಇಲಿ ಪಾಶಾಣ ಸೇವಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು

ಜನತಶಾಬ್ದಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು

FATAFAT-NEWS-2ಶಿವಮೊಗ್ಗ : ನಗರದ ಶೇಷಾದ್ರಿಪುರಂ ಸಾಮಿಲ್ ಬಳಿ ಜನಶತಾಬದ್ಧಿ ರೈಲಿಗೆ ಸಿಲುಕಿ ನಿವೃತ್ತ ನೌಕರರೊಬ್ಬರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಚಿಕ್ಕನರಸಯ್ಯ (70) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕನರಸಯ್ಯ ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದರು. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

shimoga-to-bangalore-jan-shatabdi-train-railway.webp

ಇದನ್ನೂ ಓದಿ » ಅಮಿತ್‌ ಷಾ ವಿರುದ್ಧ ಶಿವಮೊಗ್ಗದಲ್ಲಿ ಮುಂದುವರೆದ ಆಕ್ರೋಶ

ಆಗುಂಬೆ ಬಳಿ ಕಾರು ಅಪಘಾತ

FATAFAT-NEWS-3ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತವಾಗಿದೆ. ತಾಲೂಕಿನ ಆಗುಂಬೆ ಸಮೀಪದ ಕೊಳಿಗೆ ಬಿಳುವೆಮನೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ಕಾರು ಮಣಿಪಾಲದಿಂದ ಶಿವಮೊಗ್ಗ ಕಡೆಗೆ ತೆರಳುವಾಗ ಅಪಘಾತಕ್ಕೀಡಾಗಿದ್ದಾರೆ. ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತೂ ಮೋಡ ಕವಿದ ವಾತಾವರಣ, ಎಷ್ಟಿರುತ್ತೆ ತಾಪಮಾನ?

Leave a Comment