ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರಿಂದ ರಾತ್ರಿ ದಿಢೀರ್‌ ಏರಿಯಾ ಡಾಮಿನೇಷನ್‌

SHIVAMOGGA LIVE NEWS, 18 JANUARY 2025

ಶಿವಮೊಗ್ಗ : ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಏರಿಯಾ ಡಾಮಿನೇಷನ್‌ ಮತ್ತು ಕಾಲ್ನಡಿಗೆ ವಿಶೇಷ ಗಸ್ತು (Patrolling) ಮಾಡಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ನಗರದ ಎ.ಎ.ವೃತ್ತ, ಕಸ್ತೂರ್‌ ಬಾ ರಸ್ತೆ, ಉರ್ದು ಬಜಾರ್‌,  ಬಿ.ಬಿ.ರಸ್ತೆ, ಬೈ ಪಾಸ್‌, ಇಮಾಮ್‌ ಬಡಾ, ಟಿಪ್ಪು ನಗರ, ಸಿದ್ದೇಶ್ವರ ವೃತ್ತ, ಗೋಪಿ ಶೆಟ್ಟಿ ಕೊಪ್ಪ, ಬಸವನಗುಡಿ, ಎ ಎ ಕಾಲೋನಿ, ಆಟೋ ಸ್ಟಾಂಡ್‌, ದುರ್ಗಿಗುಡಿ, ಬಾಲರಾಜ್‌ ಅರಸ್‌ ರಸ್ತೆ, ತಿಲಕ್‌ ನಗರ, ಕೋರ್ಟ್‌ ವೃತ್ತ, ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ರಾಗಿಗುಡ್ಡ, ಭದ್ರಾವತಿಯ ಶಿವಾಜಿ ವೃತ್ತ, ಅಣ್ಣಾ ನಗರ, ಬೊಮ್ಮನಕಟ್ಟೆ, ಬಿ.ಆರ್.ಪಿ, ಹೊಳೆಹೊನ್ನೂರು ಟೌನ್‌, ಶಿಕಾರಿಪುರ ಪಟ್ಟಣದಲ್ಲಿ ವಿಶೇಷ ಗಸ್ತು ಮಾಡಲಾಯಿತು.

Police-Area-domination Patrolling-in-Shimoga-shikaripura-and-bhadravathi.

ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು 12 ಲಘು ಪ್ರಕರಣ, ಕೋಟ್ಪಾ ಕಾಯ್ದೆ ಅಡಿ 7 ಪ್ರಕರಣ ದಾಖಲಿಸಲಾಗಿದೆ. ವಿಶೇಷ ಗಸ್ತು ಕಾರ್ಯಾಚರಣೆಯಲ್ಲಿ ಆಯಾ ಭಾಗದ ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Kalleshwara-Enterprises.webp

Abhishek-padavidhara-sahakara-sanga

ಇದನ್ನೂ ಓದಿ » ಶಿವಮೊಗ್ಗದಲ್ಲಿ ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ, ಕಾರ್ಯಕ್ರಮದಲ್ಲಿ ಮಿನಿಸ್ಟರ್‌ ಹೇಳಿದ್ದೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment