ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 28 JANUARY 2025
ಶಿವಮೊಗ್ಗ : ಇನ್ಸುರೆನ್ಸ್ (Insurance) ಇಲ್ಲದ ಖಾಸಗಿ ಬಸ್‌ಗೆ ಶಿವಮೊಗ್ಗದ ಸಂಚಾರ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ನಗರದ ಮಿಳಘಟ್ಟ ಬಳಿ ಪರಿಶೀಲನೆ ವೇಳೆ ಖಾಸಗಿ ಬಸ್ಸಿಗೆ ಇನ್ಸುರೆನ್ಸ್ ಇಲ್ಲದಿರುವುದು ಗೊತ್ತಾಗಿತ್ತು.
ಪಶ್ಚಿಮ ಸಂಚಾರ ಠಾಣೆ ಪೊಲೀಸರು ಕೂಡಲೆ ಬಸ್ಸನ್ನು ವಶಕ್ಕೆ ಪಡೆದು, ಇನ್ಸುರೆನ್ಸ್ ಕಟ್ಟುವಂತೆ ಸೂಚಿಸಿದ್ದರು. ಇನ್ಸುರೆನ್ಸ್ ಇಲ್ಲದ್ದಕ್ಕೆ ಬಸ್ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. 51 ಸಾವಿರ ರೂ. ಇನ್ಸುರೆನ್ಸ್ ಹಣ ಕಟ್ಟಿ, ರಶೀದಿ ತೋರಿಸಿದ ನಂತರ ಬಸ್ ಬಿಡುಗಡೆ ಮಾಡಲಾಗಿದೆ.

ಪಿಎಸ್ಐ ತಿರುಮಲೇಶ್, ಸಿಬ್ಬಂದಿ ಪ್ರಕಾಶ್, ಪ್ರವೀಣ್ ಪಾಟೀಲ್, ಪ್ರಶಾಂತ್ ಕುಮಾರ್, ದಿನೇಶ್, ಹರೀಶ್ ತಪಾಸಣೆ ನಡೆಸಿದ್ದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಚಿರತೆ ಮೃತದೇಹ ಪತ್ತೆ, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು
LATEST NEWS
- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

- ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

- ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

- ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

- ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು















