ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 3 FEBRUARY 2025
ಶಿವಮೊಗ್ಗ : ಬಸ್ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನ ಮಾಡುತ್ತಿದ್ದ ಖದೀಮರು ಈ ಪುರುಷರ ಜೇಬಿಗೆ ಕೈ ಹಾಕಲು ಆರಂಭಿಸಿದ್ದಾರೆ. ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪ್ಯಾಂಟ್ ಜೇಬಿನಿಂದ ಪರ್ಸ್ ಪಿಕ್‌ಪಾಕೆಟ್ ಮಾಡಿದ್ದಾರೆ. ಅದರಲ್ಲಿ ದುಬಾರಿ ಬೆಲೆಯ ಬ್ರೇಸ್‌ಲೆಟ್ ಮತ್ತು ನಗದು ಇತ್ತು ಎಂದು ಆರೋಪಿಸಲಾಗಿದೆ.
ತೇವರಚಟ್ನಹಳ್ಳಿಯ ಹೊನ್ನೂರಪ್ಪ ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಚಳ್ಳಕೆರೆಗೆ ತೆರಳುವ ಬಸ್ ಹತ್ತಿದ್ದರು. ಸೀಟಿನಲ್ಲಿ ಕುಳಿತು ಟಿಕೆಟ್ ಮಾಡಿಸಲು ಪರ್ಸ್‌ಗೆ ತೆಗೆಯಲು ಮುಂದಾದಾಗ ಜೇಬಿನಲ್ಲಿ ಪರ್ಸ್ ಇರಲಿಲ್ಲ.

ಪರ್ಸ್‌ನಲ್ಲಿ 11.500 ಗ್ರಾಂ ತೂಕದ ಸುಮಾರು 54 ಸಾವಿರ ರೂ. ಮೌಲ್ಯದ ಚಿನ್ನದ ಬ್ರೇಸ್‌ಲೆಟ್, 4500 ರೂ. ನಗದು, ಬ್ಯಾಂಕ್ ಒಂದ ಎಟಿಎಂ ಕಾರ್ಡ್ ಇತ್ತು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ‘ಎಚ್ಚರ.. ಎಚ್ಚರ.. ಈ ರಸ್ತೆ ಲಿಮ್ಕಾ ದಾಖಲೆಗೆ ಸೇರಲಿದೆ’, ಜನರಿಂದ ಬ್ಯಾನರ್, ಎಲ್ಲಿದೆ ಈ ರೋಡ್?
LATEST NEWS
- ದುರಸ್ತಿ ವೇಳೆ ಲೈನ್ ಮ್ಯಾನ್‌ಗೆ ಕರೆಂಟ್ ಶಾಕ್, ಸ್ಥಳದಲ್ಲೆ ಸಾವು

- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

About The Editor
ನಿತಿನ್ ಆರ್.ಕೈದೊಟ್ಲು















