ಶಿವಮೊಗ್ಗದಲ್ಲಿ ಬಾರ್‌ ಮುಂಭಾಗ ಇಬ್ಬರು ಯುವಕರ ಮೇಲೆ ರಾಡ್‌ನಿಂದ ಅಟ್ಯಾಕ್‌

ಶಿವಮೊಗ್ಗ : ಕ್ಷುಲಕ ವಿಚಾರಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದ್ದು ಇಬ್ಬರು ಯುವಕರ ಮೇಲೆ ರಾಡ್‌ನಿಂದ (Rod) ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ಬ್ಲೂ ಮೂನ್‌ ಬಾರ್‌ ಮುಂಭಾಗ ಘಟನೆ ಸಂಭವಿಸಿದೆ.  

ಹೊಸಮನೆಯ ಹರೀಶ್‌ (35) ಮತ್ತು ಗೋಪಾಳದ ಮಂಜುನಾಥ್‌ (28) ಗಾಯಾಳುಗಳು.

ಘಟನೆ ಸಂಭವಿಸಿದ್ದು ಹೇಗೆ?

ಹರೀಶ್‌ ಮತ್ತು ಮಂಜುನಾಥ್‌ ಸ್ನೇಹಿತರೊಂದಿಗೆ ಬ್ಲೂ ಮೂನ್‌ ಬಾರ್‌ಗೆ ತೆರಳಿದ್ದರು. ಹೊರ ಬರುವಾಗ ಕ್ಷುಲಕ ವಿಚಾರದಲ್ಲಿ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಉಳಿದ ಸ್ನೇಹಿತರು ಹರೀಶ್‌ ಮತ್ತು ಮಂಜುನಾಥ್‌ ಮೇಲೆ ರಾಡ್‌ನಿಂದ (Rod) ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.

210225-Assault-on-two-persons-in-sagara-road-in-Shimoga-city rod

ಹಲ್ಲೆಗೊಳಗಾಗಿರುವ ಹರೀಶ್‌ನನ್ನು ನಗರದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ್‌ನನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

NATIONAL-PUBLIC-SCHOOL-scaled

ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Parishrama

ಇದನ್ನೂ ಓದಿ » ಹಂದಿ ಅಣ್ಣಿ ಕೊಲೆ ಕೇಸ್‌, ಶಿವಮೊಗ್ಗ ಕೋರ್ಟ್‌ ಸುತ್ತ ಬಂದೋಬಸ್ತ್‌, ಡ್ರೋಣ್‌ ಕಣ್ಗಾವಲು, ಕಾರಣವೇನು?

210225-Assault-on-two-persons-in-sagara-road-in-Shimoga-city rod

Leave a Comment