ಯಡಿಯೂರಪ್ಪ ಜನ್ಮದಿನ, ವಿಷ್‌ ಮಾಡಿದ್ರಾ ಈ‍ಶ್ವರಪ್ಪ? ಏನಂದ್ರು?

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಕ್ಕೆ (Birthday) ಶುಭಕೋರಿದರಾ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಸು ಸಿಡಿಮಿಡಿಗೊಂಡರು. ಅಲ್ಲದೆ ಎಲ್ಲವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಡಬೇಕು ಎಂದು ತಿಳಿಸಿದರು. (ಈ ಸುದ್ದಿಯನ್ನು ಇನ್ನು 55 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ಪತ್ರಕರ್ತರು, ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ವಿಷ್‌ ಮಾಡಿದ್ರಾ ಎಂದು ಪ್ರಶ್ನಿಸಿದರು. ಆಗ ಈಶ್ವರಪ್ಪ, ಇವತ್ತು ನಾನು ಈ ಸ್ಥಿತಿಯಲ್ಲಿ ಇರಲು ಯಡಿಯೂರಪ್ಪ ಕೂಡ ಕಾರಣ ಎಂದರು.

ಈಶ್ವರಪ್ಪ ಏನೆಲ್ಲ ಹೇಳಿದರು?

Former-Minister-KS-Eshwarappa

ಯಡಿಯೂರಪ್ಪ ನನ್ನ ಗುರು. ಅವರಿಗೆ ನಾನು ವಿಷ್‌ ಮಾಡಲೇಬೇಕಾ? ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೋಗಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳುತ್ತೇವಾ? ನಾನು ಇವತ್ತು ಹೀಗಿರಲು ಆರ್‌ಎಸ್‌ಎಸ್‌, ನನ್ನ ತಂದೆ, ತಾಯಿ ಮತ್ತು ಯಡಿಯೂರಪ್ಪ ಕಾರಣ. ತಂದೆ – ತಾಯಿಯನ್ನು ನಾವು ಮರೆಯಲು ಸಾಧ್ಯವೆ. ಈಗಲು ಪ್ರತಿ ದೀಪಾವಳಿಗೆ ಹಿರಿಯರ ಪೂಜೆಯಂದು ನನ್ನ ತಂದೆ – ತಾಯಿಗೆ ನಾನು ದೀಪ ಬೆಳಗುತ್ತೇನೆ. ಹಾಗೆಯೇ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ನಾನು ಮರೆತಿಲ್ಲ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಪ್ರತಿಯೊಂದರಲ್ಲು ರಾಜಕೀಯ ನೋಡುವುದು ಸರಿಯಲ್ಲ. ಮೊದಲು ಈ ದೃಷ್ಟಿಕೋನ ಬದಲಾಗಬೇಕು ಎಂದು ಸಿಡಿಮಿಡಿಗೊಂಡರು.

NATIONAL-PUBLIC-SCHOOL-scaled

ಇದನ್ನೂ ಓದಿ » ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್‌ ಕೊನೆಯುಸಿರು

Former-Minister-KS-Eshwarappa

Leave a Comment