ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಸೇತುವೆಯ ಮೇಲ್ಭಾಗದಲ್ಲಿ ಡಾಂಬರೀಕರಣ ಕಾರ್ಯ ಆರಂಭವಾಗಿದೆ.

ಡಾಂಬರೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರ ಮಾಧ್ಯಮ ವಿಭಾಗ ಫೋಟೊಗಳನ್ನು ಬಿಡುಗಡೆ ಮಾಡಿದೆ. ಈವರೆಗು ಡ್ರೋಣ್‌ ವಿಡಿಯೋಗಳ ಮೂಲಕ ಸಿಗಂದೂರು ಸೇತುವೆ (Bridge) ಬೆರಗು ಮೂಡಿಸುತ್ತಿತ್ತು. ಈಗ ಡಾಂಬರೀಕರಣ ಆರಂಭವಾಗಿರುವ ಸಂಗತಿ ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಖುಷಿ ಉಂಟು ಮಾಡಿದೆ.

road work on sigandur bridge begins

2019ರಲ್ಲಿ ಸಿಗಂದೂರು ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. 423 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದು ದೇಶದಲ್ಲಿಯೇ ಎರಡನೇ ಅತಿ ಉದ್ದನೆಯ ಕೇಬಲ್‌ ಸೇತುವೆಯಾಗಿವೆ. ಒಟ್ಟು 2.44 ಕಿ.ಮೀ ಉದ್ದದ ಸೇತುವೆ, 11 ಮೀಟರ್‌ ಅಗಲವಾದ ರಸ್ತೆ ಹೊಂದಿರಲಿದೆ.

road work on sigandur bridge begins

road work on sigandur bridge begins

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ‘ಬೆಂಗಳೂರಿನ ಕಾಯಿಲೆ ಸಾಗರಕ್ಕೆ ಕಾಲಿಟ್ಟಿದೆ’, ಮಾಜಿ ಮಿನಿಸ್ಟರ್‌ ಹಾಲಪ್ಪ ಹೀಗೆ ಹೇಳಿದ್ದೇಕೆ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 22, 2025 at 9:52 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 22, 2025

Leave a Comment