ಶಿವಮೊಗ್ಗದಲ್ಲಿ ಬೈಕ್‌ ಖರೀದಿಗೆ ಬಂದವನು ಟ್ರಯಲ್‌ ನೋಡಲು ಕೊಂಡೊಯ್ದ, ಹಿಂತಿರುಗಲೇ ಇಲ್ಲ, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಖರೀದಿಸುವವನಂತೆ ಬಂದು ಬೈಕ್‌ ಟ್ರಯಲ್‌ (Trail) ನೋಡಲು ಕೊಂಡೊಯ್ದವನು ಹಿಂತಿರುಗಿಲ್ಲ ಎಂದು ಆರೋಪಿಸಿ ಬೈಕ್‌ ಮಾಲೀಕ ದೂರು ನೀಡಿದ್ದಾನೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸನಗರದ ಪ್ರಮೋದ್‌ ಭಟ್‌ ಎಂಬುವವರು ತಮ್ಮ ಪಲ್ಸರ್‌ ಬೈಕ್‌ ಮಾರಾಟ ಮಾಡಲು ನಿರ್ಧರಿಸಿ ಫೇಸ್‌ಬುಕ್‌ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ವಾಸಿ ನವೀನ್‌ ಎಂಬಾತ ಇದಕ್ಕೆ ರಿಪ್ಲೆ ಮಾಡಿ, ಬೈಕ್‌ನ ವಿವರ ಪಡೆದುಕೊಂಡಿದ್ದ. ಮಾ.30ರಂದು ಶಿವಮೊಗ್ಗಕ್ಕೆ ಬರುವುದಾಗಿ ಆತ ತಿಳಿಸಿದ್ದರಿಂದ ಪ್ರಮೋದ್‌ ಭಟ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬಂದಿದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

‘ಲೋನ್‌ ಕಟ್ಟಿಕೊಳ್ತೀನಿ, ಟ್ರಯಲ್‌ ನೋಡ್ತೀನಿ’

ಅಶೋಕ ಹೊಟೇಲ್‌ ಬಳಿ ಪ್ರಮೋದ್‌ ಭಟ್‌ನನ್ನು ಭೇಟಿಯಾದ ನವೀನ್‌ ಎಂಬಾತ, ಬೈಕ್‌ ಖರೀದಿಗೆ ಆಸಕ್ತಿ ತೋರಿಸಿದ್ದ. ‘70 ಸಾವಿರ ರೂ. ಹಣ ನೀಡುತ್ತೇನೆ. ಉಳಿದ 1.20 ಲಕ್ಷ ರೂ. ಬೈಕ್‌ ಸಾಲವನ್ನು ತೀರಿಸುತ್ತೇನೆʼ ಎಂದು ತಿಳಿಸಿದ್ದ. ಅಲ್ಲದೆ ಬೈಕ್‌ನ ಟ್ರಯಲ್‌ (Trail) ನೋಡುವುದಿದೆ ಎಂದು ತಿಳಿಸಿ ಕೊಂಡೊಯ್ದಿದ್ದ.

ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ

ಮಧ್ಯಾಹ್ನ 12 ಗಂಟೆಗೆ ಬೈಕ್‌ ಕೊಂಡೊಯ್ದವನು ಹಿಂತಿರುಗಿರಲಿಲ್ಲ. ಮಧ್ಯಾಹ್ನ 2 ಗಂಟೆವರೆಗೆ ಫೋನ್‌ ಸ್ವೀಕರಿಸಿದ್ದ ನವೀನ್‌, ಬಳಿಕ ಫೋನ್‌ ಸ್ವೀಕರಿಸಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೈಕ್‌ನ ಟ್ರಯಲ್‌ಗೆ ಕೊಂಡೊಯ್ದವನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪ್ರಮೋದ್‌ ಭಟ್‌ ದೂರು ನೀಡಿದ್ದಾರೆ.

Nirantara-Ladies-PG-Shimoga.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment