NEWS HIGHLIGHTS
ಶಿವಮೊಗ್ಗ : ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ಕಾಯಿನ್ ಬಾಕ್ಸ್ (Coin Box) ಒಡೆದು ಹಣ ಕಳ್ಳತನ ಮಾಡಲಾಗಿದೆ. ಗೆಜ್ಜೇನಹಳ್ಳಿಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಘಟಕದಲ್ಲಿ ಘಟನೆ ನಡೆದಿದೆ.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.ಗ್ರಾಮ ಪಂಚಾಯಿತಿ ವತಿಯಿಂದ ಗೆಜ್ಜೇನಹಳ್ಳಿಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 5 ರೂ. ಕಾಯಿನ್ ಹಾಕಿದರೆ 20 ಲೀಟರ್ ಶುದ್ಧ ಕುಡಿಯುವ ನೀರು ಬರುತ್ತದೆ. ಕಳೆದ ಗುರುವಾರ ನೀರಿನ ಘಟಕದ ಕಾಯಿನ್ ಬಾಕ್ಸ್ (Coin Box) ಒಡೆದು ಸುಮಾರು 8 ಸಾವಿರ ರೂ. ಹಣ ದೋಚಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ನೀರು ಗಂಟಿ ನಾಗರಾಜ ನಾಯ್ಕ ದೂರು ನೀಡಿದ್ದಾರೆ. ವಿನೋಬಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ
