ಶಿವಮೊಗ್ಗ : ದಿನಸಿ ಖರೀದಿಸಿ ಹಿಂತಿರುಗುವಷ್ಟರಲ್ಲಿ ಮನೆಯಲ್ಲಿ (House) ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಸವಳಂಗ ರಸ್ತೆಯ ಜ್ಯೋತಿನಗರದ ಪ್ರಕಾಶ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪ್ರಕಾಶ್ ಅವರು ತಮ್ಮ ಪತ್ನಿಯೊಂದಿಗೆ ಗೋಪಿ ಸರ್ಕಲ್ನಲ್ಲಿ ದಿನಸಿ ಖರೀದಿಗೆ ತೆರಳಿದ್ದರು. ಮನೆಗೆ (House) ಹಿಂತಿರುಗಿ ಬೆಡ್ ರೂಂಗೆ ಹೋದಾಗ ಚಿನ್ನಾಭರಣದ ಬಾಕ್ಸ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬೀರುವಿನಲ್ಲಿಟ್ಟಿದ್ದ 9 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 51 ಸಾವಿರ ರೂ. ನಗದು ನಾಪತ್ತೆಯಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ
ಮನೆಯ ಬಲಭಾಗದ ಕಿಟಕಿಯ ಸರಳು ಮುರಿದು ಒಳಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

