ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಮಾಲೀಕರು ಊಟಕ್ಕೆ ತೆರಳಿದ್ದಾಗ ಹುಡುಗನೊಬ್ಬ ಅಂಗಡಿಯ (SHOP) ಒಳಗೆ ಬಗ್ಗಿ ಕ್ಯಾಶ್ ಡ್ರಾದಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ. ಶಿವಮೊಗ್ಗ ನಗರದ ಸೀಗೆಹಟ್ಟಿಯ ಕೆಂಚರಾಯ ಬೀದಿಯ ಕಿರಾಣಿ ಅಂಗಡಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ » ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು
ಅಂಗಡಿಯ ಮಾಲೀಕರಾದ ಸವಿತಾ ಅವರು ಮಧ್ಯಾಹ್ನ ಊಟಕ್ಕೆ ಮನೆಯ ಒಳಗೆ ತೆರಳಿದ್ದರು. ಆಗ ಅಂಗಡಿಯಿಂದ (SHOP) ಜೋರು ಶಬ್ದ ಕೇಳಿಸಿದೆ ಎಂದು ಮರಳಿದ್ದರು. ಅವರನ್ನು ಕಂಡು ಹುಡುಗನೊಬ್ಬ ಪರಾರಿಯಾಗಿದ್ದಾನೆ. ಸವಿತಾ ಅವರು ಅಂಗಡಿಗೆ ಬಂದಾಗ ಆ ಹುಡುಗ ಕ್ಯಾಶ್ ಡ್ರಾ ಕಡೆಗೆ ಬಗ್ಗಿ ಅದರೊಳಗೆ ಕೈ ಹಾಕಿದ್ದ. ಆಗ ಸವಿತಾ ಅವರು ಜೋರಾಗಿ ಕೂಗಿಕೊಂಡಿದ್ದು, ಆತ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಮಧ್ಯಾಹ್ನ 2.57ರ ಹೊತ್ತಿಗೆ ಹುಡುಗ ಅಂಗಡಿಗೆ ಬಂದು ಕ್ಯಾಶ್ ಡ್ರಾದಲ್ಲಿದ್ದ ಹಣ ಕದ್ದೊಯ್ದಿದ್ದಾನೆ. ಸುಮಾರು 1500 ರೂ. ಹಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

About The Editor
ನಿತಿನ್ ಆರ್.ಕೈದೊಟ್ಲು















