ಸಾಗರದಲ್ಲಿ ಲಾರಿ, ಕಾರು ಪಲ್ಟಿ, ಅಪಘಾತಕ್ಕೆ ಕಾರಣ ಹಾವು, ಏನಿದು ಪ್ರಕರಣ?

ಸಾಗರ : ರಸ್ತೆಯಲ್ಲಿ ಕಾರಿಗೆ ಅಡ್ಡಲಾಗಿ ಬಂದ ಹಾವನ್ನು (Snake) ತಪ್ಪಿಸುವ ಭರದಲ್ಲಿ ಚಾಲಕ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡಿಸಿದ್ದಾನೆ. ಘಟನೆಯಲ್ಲಿ ಲಾರಿ ಪಲ್ಟಿಯಾಗಿ ಶುಂಠಿ ಚೀಲಗಳು ಕೆಳಗೆ ಬಿದ್ದಿವೆ.

ಇದನ್ನೂ ಓದಿ » ತೀರ್ಥಹಳ್ಳಿ ಬಾಲಕ ಸಾವು ಪ್ರಕರಣ, ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶ

ಸಾಗರ ತಾಲೂಕಿನ ಭೀಮನೇರಿ ಸಮೀಪ ಘಟನೆ ಸಂಭವಿಸಿದೆ. ಸಾಗರದಿಂದ ಶುಂಠಿ ತುಂಬಿಕೊಂಡು ಹುಬ್ಬಳ್ಳಿಗೆ ಹೋಗುತ್ತಿದ್ದ ಲಾರಿ ಮತ್ತು ಹುಬ್ಬಳಿ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.

ಹಾವನ್ನು (Snake)  ತಪ್ಪಿಸಲು ಹೋಗಿ ಕಾರಿನ ಚಾಲಕ ಎದುರು ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆಸಿದ್ದಾನೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕ ರಸ್ತೆ ಪಕ್ಕಕ್ಕೆ ತೆಗೆದುಕೊಂಡಾಗ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಶುಂಠಿಚೀಲಗಳು ಕೆಳಗುರುಳಿವೆ. ಲಾರಿ ಮತ್ತು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

Kalleshwara-Enterprises.webp

car-and-truck-mishap-due-to-snake-at-bheemaneri-in-sagara

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment