BREAKING NEWS – ಉಗ್ರರ ದಾಳಿ, ಮಂಜುನಾಥ ರಾವ್‌ ಮೃತದೇಹ ನಾಳೆ ಶಿವಮೊಗ್ಗಕ್ಕೆ

ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನ ದಾಳಿಯಲ್ಲಿ ಸಾವನ್ನಪ್ಪಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಅವರ ಪಾರ್ಥೀವ ಶರೀರ (deceased) ಗುರುವಾರ ಬೆಳಗ್ಗೆ ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ » ಮಗನ ಸಾಧನೆ ಸಂಭ್ರಮಿಸಲು ಕುಟುಂಬದ ಜೊತೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್‌ ಉಗ್ರರ ದಾಳಿಗೆ ಬಲಿ

ಮಾಧ್ಯಮಗಳ ಜೊತೆ ವಿಮಾನದ ಮಾಹಿತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಹಂಚಿಕೊಂಡಿದ್ದಾರೆ.

ಇಂದು ಸಂಜೆ ಕಾಶ್ಮೀರದಿಂದ ಮಂಜುನಾಥ್‌ ರಾವ್‌ ಅವರ ಪಾರ್ಥೀವ ಶರೀರವನ್ನು ಏರ್‌ಲಿಫ್ಟ್‌ ಮಾಡಲಾಗುತ್ತದೆ. ಬೆಂಗಳೂರಿಗೆ ಆಗಮಿಸುವ ಪಾರ್ಥೀವ ಶರೀರ ನಾಳೆ ಬೆಳಗ್ಗೆ ಶಿವಮೊಗ್ಗಕ್ಕೆ ಬರಲಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
pahalgam-attack-shimoga-manjunath-rao-dies-in-the-incident

Leave a Comment