UPSC 2024 ಫಲಿತಾಂಶ: 1000ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆ, ಕರ್ನಾಟಕದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಬಾರಿ 1000ಕ್ಕೂ ಹೆಚ್ಚು ಅಭ್ಯರ್ಥಿಗಳು ದೇಶದ ಅತ್ಯುನ್ನತ ಸಿವಿಲ್ ಸರ್ವೀಸಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಹಲವರು IAS, IPS, IFS ಸೇರಿದಂತೆ ವಿವಿಧ ಕೇಂದ್ರ ಸೇವೆಗಳ ಭಾಗವಾಗಲಿದ್ದಾರೆ.

ಈ ಸಾಧನೆಯ ಪೈಕಿ ಗಮನ ಸೆಳೆಯುತ್ತಿರುವುದು India 4 IAS ಸಂಸ್ಥೆ. ನಿವೃತ್ತ ಹಿರಿಯ ಅಧಿಕಾರಿಗಳಾದ ಡಾ. ಸಿ.ಎಸ್. ಕೆದಾರ್, ಐಎಎಸ್ ಮತ್ತು ಡಾ. ಜಿ.ಎನ್. ಶ್ರೀಕಂಠಯ್ಯ, ಐಎಫ್ಎಸ್ ಅವರ ನೇತೃತ್ವದ ಈ ಸಂಸ್ಥೆಯು 20ಕ್ಕೂ ಹೆಚ್ಚು ರ‍್ಯಾಂಕ್‌ಗಳನ್ನ ಈ ವರ್ಷ ಪಡೆದಿದೆ. ವಿಶೇಷವೆಂದರೆ, ಕರ್ನಾಟಕದಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು India 4 IAS ನಿಂದ ಬಂದಿದ್ದಾರೆ.

ಹಾವೇರಿ ಜಿಲ್ಲೆಯ ಡಾ. ಸಚಿನ್ ಬಿ. ಗುತ್ತೂರ್ ಅವರು ಅಖಿಲ ಭಾರತ 41ನೇ ರ‍್ಯಾಂಕ್‌‌ ಗಳಿಸಿ India 4 IAS ನ ಮೊದಲಿಗರಾಗಿದ್ದಾರೆ. ಕರ್ನಾಟಕದ ಡಾ. ರಂಗ ಮಂಜು (AIR 24) ಅವರು ಕೂಡ ಕರ್ನಾಟಕಕ್ಕೆ ಮೊದಲಿಗರಾಗಿ ಸಾಧನೆಯ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ India 4 IAS ಗಣನೀಯ ಸಾಧನೆ ಮಾಡುತ್ತಾ UPSC ಗೆ ತಯಾರಿ ಮಾಡುವ ಯುವಕರಿಗೆ ವಿಶ್ವಾಸದ ಕೇಂದ್ರವಾಗಿ ರೂಪಗೊಂಡಿದೆ. ದೆಹಲಿ, ಹೈದರಾಬಾದ್ ನಂತಹ ಶಿಕ್ಷಣ ಕೇಂದ್ರಗಳಿಂದ ಬಂದ ನಿಪುಣ ಅಧ್ಯಾಪಕರಿಂದ ಬೋಧನೆ, ಆಧುನಿಕ ಹಾಗೂ ಸೂಕ್ತವಾದ ಶೈಕ್ಷಣಿಕ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆ ಇದಾಗಿದೆ.

Kalleshwara-Enterprises.webp

india4ias

ಈ ಸಾಧನೆಯ ಮೂಲಕ ಕರ್ನಾಟಕವು ಕೇಂದ್ರ ನಾಗರೀಕ ಸೇವೆಗಳಿಗೆ ಹೆಚ್ಚು ಹೆಚ್ಚು ಅಧಿಕಾರಿಗಳನ್ನು ನೀಡುತ್ತಿರುವ ರಾಜ್ಯಗಳಲ್ಲಿ ಒಂದಾಗಿ ಬೆಳೆದಿದೆ. ಈ ವರ್ಷವೂ ದಿಟ್ಟತೆ, ಶಿಸ್ತು ಮತ್ತು ಸ್ಪಷ್ಟ ಗುರಿಯೊಂದಿಗೆ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಸಾಧನೆ ಮಾಡಿದ್ದು, India 4 IAS ಮಾದರಿಯ ತರಬೇತಿ ಸಂಸ್ಥೆಗಳ ಪಾತ್ರವನ್ನು ಮತ್ತಷ್ಟು ದೃಢಪಡಿಸುತ್ತದೆ.

india4ias1

ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ವತಿಯಿಂದ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ 2024–25ರಲ್ಲಿ ಯಶಸ್ಸು ಪಡೆದ ಕರ್ನಾಟಕದ ಅಭ್ಯರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಹೆಮ್ಮೆಯಿಂದ ತಿಳಿಸುತ್ತೇವೆ. ಜೊತೆಗೆ, ಹಲವು ಹಿರಿಯ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

VISIT INDIA4IAS WEBSITE : https://india4ias.com/

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment