ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿಕಾರಿಪುರ: ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗುವನ್ನು ಹಣಕ್ಕಾಗಿ ಪೋಷಕರೆ ಮಾರಾಟ (Child Trafficking) ಮಾಡಿದ್ದಾರೆ. ಶಿಕಾರಿಪುರದ ದಂಪತಿ ಹಣ ನೀಡಿ ಮಗು ಖರೀದಿಸಿದ್ದಾರೆ. ಈಗ ಮಗುವಿನ ಪೋಷಕರು ಮತ್ತು ಖರೀದಿಸಿದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ?
ಶಿವಮೊಗ್ಗದ ದಂಪತಿಗೆ 2023ರ ಆಗಸ್ಟ್ 15ರಂದು ಹೆಣ್ಣು ಮಗು ಜನಿಸಿತ್ತು. 2025ರ ಜನವರಿ ತಿಂಗಳಲ್ಲಿ ಈ ಮಗುವನ್ನು ಶಿಕಾರಿಪುರ ತಾಲೂಕಿನ ದಂಪತಿಗೆ ಮಗುವಿನ ಪೋಷಕರು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಮಗುವಿನ ಪೋಷಕರಿಗೆ 49 ಸಾವಿರ ರೂ. ಮುಂಗಡ ಹಣ ನೀಡಲಾಗಿತ್ತು. ಬಳಿಕ 30,650 ರೂ.ಗಳನ್ನು ಗೂಗಲ್ ಪೇ ಮೂಲಕ ಕಳುಹಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಚಾರ ತಿಳಿದು ಪರಿಶೀಲಿಸಿದ ಮಕ್ಕಳ ಕಲ್ಯಾಣ ಸಮಿತಿ, ಮಗುವನ್ನು ರಕ್ಷಿಸಿದೆ. ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿದೆ. ಇನ್ನು, ಮಗುವನ್ನು ಮಾರಾಟ ಮಾಡಿದ್ದು ಮತ್ತು ಮಗುವನ್ನು ಖರೀದಿಸಿದ್ದಕ್ಕಾಗಿ ನಾಲ್ವರ ವಿರುದ್ಧ ದೂರು ನೀಡಿದೆ. ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ರಸ್ತೆ ದಾಟಿ ಪಕ್ಕದ ಮನೆ ಅಂಗಳಕ್ಕೆ ಪಲ್ಟಿಯಾದ ಕಾರು, ಹೇಗಾಯ್ತು ಘಟನೆ?

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






