ಶಿವಮೊಗ್ಗದಲ್ಲಿ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಏನಿದು ಕಾರ್ಯಕ್ರಮ? ಯಾರೆಲ್ಲ ಭಾಗವಹಿಸಿದ್ದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಅವರ ಸಂಸ್ಮರಣಾ ಗ್ರಂಥ ‘ಕೃಷ್ಣ ಸ್ಮೃತಿ’ ಪುಸ್ತಕ ಬಿಡುಗಡೆ (Book Release) ಸಮಾರಂಭದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಒಟ್ಟಿಗೆ ಭಾಗವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ‘ಕೃಷ್ಣ ಸ್ಮೃತಿ’ ಪುಸ್ತಕ ಬಿಡುಗಡೆ ಮಾಡಿದರು.

ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?

  • ಹಿರಿಯೂರು ಕೃಷ್ಣಮೂರ್ತಿ ಅವರದ್ದು ಮೇರು ವ್ಯಕ್ತಿತ್ವ, ಅನುಕರಣಿಯ. ಅವರು ಗತಿಸಿದ 21 ವರ್ಷದ ಬಳಿಕ ಪುಸ್ತಕ ಪ್ರಟಕಗೊಂಡಿದ್ದರೂ ಸಾಂದರ್ಭೋಚಿತವಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

  • ಮರಣ ಯಾವಾಗ ಬೇಕಿದ್ದರು ಬರಬಹುದು. ಆದರೆ ನ್ಯಾಯ, ಧರ್ಮ, ಶ್ರೇಷ್ಠ ಜೀವನ ಮೌಲ್ಯಗಳನ್ನು ಬಿಡದೇ ಮುನ್ನಡೆಯುವವನು ಧೀರ ಎಂಬ ಭರ್ತೃಹರಿಯ ಮಾತಿನಂತಹ ವ್ಯಕ್ತಿತ್ವ ಹಿರಿಯೂರು ಕೃಷ್ಣಮೂರ್ತಿ ಅವರದ್ದು.

SLV-BOOK-SHOP-SHIMOGA

  • ಬರೀ ರಾಮನ ಸ್ಮರಣೆಯಿಂದ ಆತನ ದರ್ಶನ ಆಗೊಲ್ಲ. ಬದಲಿಗೆ ರಾಮನ ಕೆಲಸ ಮಾಡಿದರೆ ರಾಮನ ದರ್ಶನ ಸಾಧ್ಯ ಎಂಬ ಹನುಮಂತನ ಉಪದೇಶ ನಮಗೆಲ್ಲರಿಗೂ ಮಾರ್ಗದರ್ಶಿಯಾಗಲಿ.

Yedyurappa-and-Eshwarappa-at-a-book-release-event.

  • ಬೇರೆಯವರಿಗೂ ಎಂದಿಗೂ ಸಂಕಟ ಕೊಡದಿರುವುದು. ಸಮಾಜದ ಕಂಟಕರಿಗೆ ತಲೆ ಬಾಗದಿರುವುದು ಹಿರಿಯೂರು ಕೃಷ್ಣಮೂರ್ತಿ ಅವರ ವ್ಯಕ್ತಿತ್ವ. ತ್ಯಾಗ ಮಾಡುವವರು ಅಮರತ್ವ ಪಡೆಯುತ್ತಾರೆ.

Sarkari-Naukarara-Sanga-Sports-

ಆನೆ ಬದುಕಿದ್ದಾಗ ಎಷ್ಟು ಬೆಲೆಯೋ ಕಾಲವಾದ ಬಳಿಕ ಅದಕ್ಕಿಂತ ಅಮೂಲ್ಯವಾಗಿರುತ್ತದೆ. ವ್ಯಕ್ತಿ ಕಾಲವಾದ ನಂತರವೂ ಅವನ ನೆರಳು ಎಷ್ಟು ದೂರ ಚಾಚುತ್ತದೆ ಎಂಬುದು ಆತನ ಮಹಾನತೆಯ ಅಳತೆಗೋಲು. ಕಾಲವಾಗಿ 21 ವರ್ಷಗಳ ನಂತರವೂ ಹಿರಿಯೂರು ಕೃಷ್ಣಮೂರ್ತಿ ಅವರ ಮಹಾನತೆಯನ್ನು ಎತ್ತಿ ತೋರುತ್ತದೆ.ಸು.ರಾಮಣ್ಣ, ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ

ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ

JNNCE-ADMISSION-2025-26

ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮತ್ತು ಈಶ್ವರಪ್ಪ ಇದೇ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಪರಸ್ಪರ ಮಾತನಾಡಲಿಲ್ಲ. ಕಾರ್ಯಕ್ರಮ ಆರಂಭಕ್ಕು ಮೊದಲು ವೇದಿಕೆ ಮುಂಭಾಗ ದತ್ತಾತ್ರೇಯ ಹೊಸಬಾಳೆ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದರು.

Yedyurappa-and-Eshwarappa-at-a-book-release-event.

ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಯಡಿಯೂರಪ್ಪ, ಈಶ್ವರಪ್ಪ ಅಕ್ಕಪಕ್ಕದಲ್ಲಿಯೇ ನಿಂತಿದ್ದರು. ಆದರೆ ಮಾತನಾಡದೆ ಮೌನವಾಗಿದ್ದರು. ಭಾಷಣದ ವೇಳೆ ಈ‍ಶ್ವರಪ್ಪ ಅವರು ಶಿವಮೊಗ್ಗದಲ್ಲಿನ ಹಿಂದಿನ ಹೋರಾಟಗಳನ್ನು ಸ್ಮರಿಸಿಕೊಂಡರು. ಈ ಸಂದರ್ಭ ಐದಾರು ಬಾರಿ ಯಡಿಯೂರಪ್ಪ ಅವರ ಹೆಸರನ್ನು ಹೇಳಿದರು.

ಇವತ್ತು ರಾಜಕೀಯ ಕ್ಷೇತ್ರದಲ್ಲಿ ನಾನೇನಾದರೂ ಸಾಧಿಸಿದ್ದರೆ, ಸ್ಥಾನಮಾನಗಳನ್ನು ಪಡೆದಿದ್ದರೆ ಅದಕ್ಕೆ ಕಾರಣರಾದವರಲ್ಲಿ ಹಿರಿಯೂರು ಕೃಷ್ಣಮೂರ್ತಿ ಕೂಡ ಒಬ್ಬರು. ವಿಸ್ತಾರವಾಗುತ್ತಾ ಹೋಗುವುದೇ ಜೀವನ, ಸಂಕುಚಿತವಾಗುತ್ತಾ ಹೋಗುವುದೇ ಮರಣ ಎಂಬ ಸ್ವಾಮಿ ವಿವೇಕಾನಂದರ ಆಶಯದಂತೆ ಸದಾ ವಿಸ್ತಾರವಾಗುತ್ತಾ ಬೆಳೆದವರು ನನ್ನ ಹಿರಿಯಣ್ಣ ಹಿರಿಯೂರು ಕೃಷ್ಣಮೂರ್ತಿ.

– ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ತಾವೂ ಹಾಗೂ ಯಡಿಯೂರಪ್ಪ ಸ್ಕೂಟರ್‌ನಲ್ಲಿ ಓಡಾಡಿ ಚಂದಾ ಹಣ ಸಂಗ್ರಹಿಸಿ 25 ಸಾವಿರ ಜನ ಸೇರಿಸಿ ಶಿವಮೊಗ್ಗದಲ್ಲಿ ರೈತರ ಸಮಾವೇಶ ಮಾಡಲು ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದ್ದರು. ಕೆ.ಹೆಚ್.ಶ್ರೀನಿವಾಸ್ ವಿರುದ್ಧ ನಾನು ಚುನಾವಣೆಗೆ ನಿಂತು ಎಂಎಲ್‌ಎ ಆಗಲು ಅವರೇ ಪ್ರೇರಣೆ.

– ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ

ರಾಷ್ಟ್ರೀಯ ಸ್ವಯಂ ಸೇವಾ ಸಂಘ ವ್ಯಕ್ತಿಗಳ ತಯಾರು ಮಾಡುತ್ತದೆ. ವ್ಯಕ್ತಿಗಳು ಸಮಾಜವನ್ನು ತಯಾರು ಮಾಡುತ್ತಾರೆ. ಅಂತಹ ವ್ಯಕ್ತಿಗಳಲ್ಲೊಬ್ಬರಾದ ಕೃಷ್ಣಮೂರ್ತಿ ಸಮಾಜವನ್ನು ತಯಾರು ಮಾಡಿದವರು.

– ಡಿ.ಹೆಚ್.ಶಂಕರಮೂರ್ತಿ, ಮಾಜಿ ಸಭಾಪತಿ

ಒಡಿಸ್ಸಾ ಕೇಂದ್ರೀಯ ವಿವಿ ಕುಲಾಧಿಪತಿ ಪ್ರೊ. ಪಿ.ವಿ.ಕೃಷ್ಣಭಟ್‌, ಹಿರಿಯ ಪ್ರಚಾರಕ ಭ.ಮ.ಶ್ರೀಕಂಠ, ಟಿ.ಪಟ್ಟಾಭಿರಾಮ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ » ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ರೈಲು ಕುರಿತು ರೈಲ್ವೆ ಇಲಾಖೆಯಿಂದ ಮಹತ್ವದ ಪ್ರಕಟಣೆ

Yedyurappa-and-Eshwarappa-at-a-book-release-event.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 18, 2025

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment