ಸೊರಬ: ಮುರುಘಾ ಮಠದಲ್ಲಿ ಬೆಂಗಳೂರಿನ ಅದಮ್ಯ ಚೇತನ, ಮುರುಘಾ ಮಠ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್ (Plate Bank) ಉದ್ಘಾಟನೆ ಹಾಗೂ ಪವಿತ್ರವನಕ್ಕೆ ಜಡೆ ಸಂಸ್ಥಾನ ಹಾಗೂ ಸೊರಬ ಮರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ. ಮಹಾಂತ ಸ್ವಾಮೀಜಿ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯವರು ಸಾರ್ವಜನಿಕ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಉಚಿತವಾಗಿ ತಟ್ಟೆ ಲೋಟ ವಿತರಿಸುವ ಉದ್ದೇಶದಿಂದ ಪ್ಲೇಟ್ ಬ್ಯಾಂಕ್ ಆರಂಭಿಸಿರುವುದು ಮಹತ್ಕಾರ್ಯವಾಗಿದೆ ಎಂದರು.
ಪ್ಲಾಸ್ಟಿಕ್ ಹಾಗೂ ಪೇಪರ್ ಪ್ಲೇಟ್, ಕಪ್ ಗಳನ್ನು ಬಳಸುವುದರಿಂದ ಪರಿಸರಕ್ಕೆ, ಪ್ರಾಣಿಗಳಿಗೆ ಹಾನಿಯಾಗುತ್ತಿದೆ. ಇದನ್ನು ತಪ್ಪಿಸುವ ಚಿಂತನೆಯಿಂದ ಸ್ಟೀಲ್ ತಟ್ಟೆ ಲೋಟದ ಬ್ಯಾಂಕ್ ಆರಂಭಿಸಿದ್ದು ಜನರು ಸದುಪಯೋಗಪಡಿಸಿಕೊಳ್ಳಬೇಕು.ಡಾ. ಮಹಾಂತ ಸ್ವಾಮೀಜಿ, ಜಡೆ ಸಂಸ್ಥಾನ
ಕಾರ್ಯಕ್ರಮಗಳಲ್ಲಿ ಪೇಪರ್ ಕಪ್, ಪ್ಲೇಟ್ ಬಳಕೆ ಸಹಜವಾಗುತ್ತಿದೆ. ಇದು ಪರಿಸರ ಹಾಗೂ ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಡೆಯುವ ಉದ್ದೇಶದಿಂದ ಸೊರಬ ಮುರುಘಾ ಮಠದಲ್ಲಿ ಸ್ಟೀಲ್ ತಟ್ಟೆ ಹಾಗೂ ಕಪ್ ಬ್ಯಾಂಕ್ ತೆರೆಯುತ್ತಿದ್ದೇವೆ.ಡಾ.ತೇಜಸ್ವಿನಿ ಅನಂತ ಕುಮಾರ್, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ
ಸೊರಬ ನಂತರ ತೀರ್ಥಹಳ್ಳಿಯಲ್ಲಿ ಪ್ಲೇಟ್ ಬ್ಯಾಂಕ್
ಮುರುಘಾ ಮಠದಲ್ಲಿ ಆರಂಭಿಸಿದ ಪ್ಲೇಟ್ ಬ್ಯಾಂಕ್‌ಗೆ 500 ತಟ್ಟೆ 500 ಲೋಟಗಳನ್ನು ಒದಗಿಸಲಾಯಿತು. ಇನ್ನು, ತೀರ್ಥಹಳ್ಳಿಯ ಕಟ್ಟೆಹಕ್ಕಲು ಸಾಲ್ಗುಡಿ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.