ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯ (Tunga Dam) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಹರಿಸಲಾಗುತ್ತಿದೆ. ಇಂದು ಸಂಜೆ ವೇಳೆಗೆ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿದ್ದರಿಂದ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ.
ನಾಲ್ಕು ಗೇಟುಗಳ ಮೂಲಕ ಒಟ್ಟು 2000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪ್ರತಿ ಗೇಟನ್ನು ಅರ್ಧ ಇಂಚಿನಷ್ಟು ಮೇಲೆತ್ತಿ ತಲಾ 500 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಒಳ ಹರಿವು ಹೆಚ್ಚಳವಾದರೆ ಮತ್ತೊಂದು ಗೇಟ್ ಮೇಲೆತ್ತುವ ಸಾಧ್ಯತೆ ಇದೆ.

ಇನ್ನು, ವಿದ್ಯುತ್ ಉತ್ಪಾದನೆಗೆ ಪವರ್ ಹೌಸ್‌ಗೆ 5500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಹಾಗಾಗಿ ಒಟ್ಟು 7500 ಕ್ಯೂಸೆಕ್ ಹೊರ ಹರಿವು ಇದೆ. ಅಷ್ಟೇ ಪ್ರಮಾಣದ ಒಳ ಹರಿವು ಕೂಡ ಇದೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ, ಬೆಳಗ್ಗೆಯಿಂದ ನಿರಂತರ ವರ್ಷಧಾರೆ, ಅಲ್ಲಲ್ಲಿ ಹಾನಿ, ಇಲ್ಲಿದೆ ಟಾಪ್ 10 ಮಳೆ ಸುದ್ದಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
