ಶಿವಮೊಗ್ಗ ಲೈವ್
ಭದ್ರಾವತಿ: ನಗರದ ಭೂತನಗುಡಿಯ ಭೂತಪ್ಪ ಶನೈಶ್ಚರ ದೇವಾಲಯದಲ್ಲಿ ಶನಿವಾರ ರಾತ್ರಿ ಹುಂಡಿ ಹಣ ಕಳವು ಮಾಡಲಾಗಿದೆ. ದೇವಾಲಯದ ಗ್ರಿಲ್ ಕಟ್ ಮಾಡಿ ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಕಾಣಿಕೆ (Kanike) ಹಣ ಕದ್ದೊಯ್ದಿದ್ದಾರೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹುಂಡಿಯಲ್ಲಿ ಕಳೆದ 3 ವರ್ಷಗಳ ಹಣವಿತ್ತು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ದೇವಾಲಯಕ್ಕೆ ಬಂದು ಬಾಗಿಲು ತೆಗೆದ ಅರ್ಚರಿಗೆ ಹುಂಡಿ ಬೀಗ ಒಡೆದಿರುವುದು ಕಂಡುಬಂದಿದೆ. ನಂತರ ಗೋಡೆಯ ಗ್ರಿಲ್ ಸಹ ಕಟ್ ಆಗಿರುವುದನ್ನು ಗಮನಿಸಿದ ಅರ್ಚಕರು ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು.

ಹಳೇನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಶ್ವಾನದಳ ಕರೆಸಿ ಶೋಧಕಾರ್ಯ ನಡೆಸಿದರು.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ » ಸಾಲದ ಕಂತು ಕಟ್ಟದ ಗ್ರಾಹಕನನ್ನು ಸಂಪರ್ಕಿಸಿದ ಬಜಾಜ್ ಫೈನಾನ್ಸ್ ಸಿಬ್ಬಂದಿಗೆ ಕಾದಿತ್ತು ಶಾಕ್, ದಾಖಲಾಯ್ತು ಕೇಸ್


ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
