ಶಿವಮೊಗ್ಗ: ಹಿಂದಿನ ಗ್ರಾಹಕರೊಬ್ಬರ ಸೋಗಿನಲ್ಲಿ ವೈಯಕ್ತಿಕ ಸಾಲ ಪಡೆದು ಕಂತು ಕಟ್ಟದೆ ಬಜಾಜ್ ಫೈನಾನ್ಸ್ (finance) ಸಂಸ್ಥೆಗೆ ವಂಚಿಸಲಾಗಿದೆ. ಈ ಸಂಬಂಧ ಸಂಸ್ಥೆಯ ಮ್ಯಾನೇಜರ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬಜಾಜ್ ಫೈನಾನ್ಸ್‌ನಿಂದ ಚಂದ್ರಶೇಖರ್ ಎಂಬುವವರ ಹೆಸರಿನಲ್ಲಿ ₹6.15 ಲಕ್ಷ ವೈಯಕ್ತಿಕ ಸಾಲ ನೀಡಲಾಗಿತ್ತು. ಕಂತು ಕಟ್ಟದ ಹಿನ್ನೆಲೆ ಚಂದ್ರಶೇಖರ್ ಅವರನ್ನು ವಿಚಾರಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ವಂಚನೆ ಆಗಿದ್ದು ಹೇಗೆ?
ಚಂದ್ರಶೇಖರ್ ಎಂಬುವವರು ಈ ಹಿಂದೆ ಬಜಾಜ್ ಫೈನಾನ್ಸ್ ಸಂಸ್ಥೆಯಲ್ಲಿ ಎರಡು ಬಾರಿ ಸಾಲ ಪಡೆದಿದ್ದರು. ಎರಡು ಬಾರಿಯು ಕಂತು ಸರಿಯಾಗಿ ಪಾವತಿಸಿ, ಸಾಲ ತೀರಿಸಿದ್ದರು. ಸಾಲ ಪಡೆಯುವಾಗ ನೀಡಿದ್ದ ಮೊಬೈಲ್ ನಂಬರ್‌ನಿಂದಲೇ ಬಜಾಜ್ ಫೈನಾನ್ಸ್ ಸಂಸ್ಥೆಗೆ 2024ರಲ್ಲಿ ಪುನಃ ಸಾಲಕ್ಕೆ ಮನವಿ ಸಲ್ಲಿಸಾಗಿತ್ತು. ಹಿಂದಿನ ಗ್ರಾಹಕರಾದ್ದರಿಂದ ಫೈನಾನ್ಸ್ ಸಂಸ್ಥೆಯು ಪೂರ್ವ ಅನುಮೋದಿತ ವೈಯಕ್ತಿಕ ಸಾಲ ಮಂಜೂರು ಮಾಡಿತ್ತು.

ಆದರೆ ಈ ಬಾರಿ ಕಂತು ಪಾವತಿಸದ ಹಿನ್ನೆಲೆ ಚಂದ್ರಶೇಖರ್ ಅವರನ್ನು ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಸಂಪರ್ಕಿಸಿದ್ದರು. ಆಗ ಚಂದ್ರಶೇಖರ್ ಅವರು ಸಾಲ ಪಡೆದಿಲ್ಲ ಎಂದು ತಿಳಿಸಿದ್ದರು.
ಮೊಬೈಲ್ ನಂಬರ್‌ನಿಂದ ಯಡವಟ್ಟು
ಚಂದ್ರಶೇಖರ್ ಅವರು ಈ ಹಿಂದೆ ಬಜಾಜ್ ಫೈನಾನ್ಸ್ ಸಂಸ್ಥೆಗೆ ನೀಡಿದ್ದ ಮೊಬೈಲ್ ನಂಬರ್ ಬಳಸುತ್ತಿರಲಿಲ್ಲ. ಈ ಹಿನ್ನೆಲೆ ಟೆಲಿಕಾಂ ಕಂಪನಿಯು ಆ ಮೊಬೈಲ್ ನಂಬರ್ ಅನ್ನು ಬೇರೊಬ್ಬರಿಗೆ ವಿತರಿಸಿತ್ತು. ಆ ಗ್ರಾಹಕ ತಾನು ಚಂದ್ರಶೇಖರ್ ಎಂದು ನಟಿಸಿ, ಬಜಾಜ್ ಫೈನಾನ್ಸ್ ಸಂಸ್ಥೆಯಿಂದ 6.15 ಲಕ್ಷ ರೂ. ವೈಯಕ್ತಿಕ ಸಾಲ ಪಡೆದುಕೊಂಡಿದ್ದ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಖಾತೆಯೊಂದಕ್ಕೆ ಹಣ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ಖಾತೆಯ ವಿವರಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಯ ಗ್ರಾಹಕರೊಬ್ಬರ ಸೋಗಿನಲ್ಲಿ ಸಾಲ ಪಡೆದು, ವಂಚಿಸಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಜಾಜ್ ಫೈನಾನ್ಸ್ ಸಂಸ್ಥೆ ಮ್ಯಾನೇಜರ್ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೊಬೈಲ್ ಬಳಕೆದಾರರೆ ಎಚ್ಚರ
ನೀವು ಈ ಹಿಂದೆ ಬಳಸುತ್ತಿದ್ದ ಮೊಬೈಲ್ ನಂಬರ್ ಬದಲಾಗಿದ್ದರೆ ಈಗಲೆ ಎಚ್ಚರ ವಹಿಸಿ. ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳಿಗೆ ಹಿಂದಿನ ಮೊಬೈಲ್ ನಂಬರ್ ಒದಗಿಸಿದ್ದರೆ ಕೂಡಲೆ ಬದಲಿಸಿ. ಬ್ಯಾಂಕ್, ಫೈನಾನ್ಸ್ ಸಂಸ್ಥೆ ಸೇರಿದಂತೆ ಎಲ್ಲೆಲ್ಲಿ ಹಿಂದಿನ ಮೊಬೈಲ್ ನೀಡಿದ್ದರು ಕೂಡಲೆ ಅಲ್ಲಿಗೆ ತೆರಳಿ ಅರ್ಜಿ ನೀಡಿ, ಈಗಿನ ಮೊಬೈಲ್ ನಂಬರ್ ಸೇರಿಸುವುದು ಉತ್ತಮ. ಇಲ್ಲವಾದಲ್ಲಿ ಸಮಸ್ಯೆ ಸೃಷ್ಟಿಯಾಗಬಹುದಾಗಿದೆ.
ಇದನ್ನೂ ಓದಿ » ತುರ್ತಾಗಿ ತನಿಖಾ ಆಯೋಗ ನೇಮಿಸಬೇಕು, ಶಿವಮೊಗ್ಗ ಸಮಾವೇಶದಲ್ಲಿ ಸಾಹಿತಿಗಳ ಪಟ್ಟು, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200