ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಆದಾಯಕ್ಕು ಮೀರಿದ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ 8 ಅಧಿಕಾರಿಗಳಿಗೆ ಸಂಬಂಧಿಸಿದ 45 ಕಡೆಗಳಲ್ಲಿ ದಾಳಿ ನಡೆಸಿದರು. ಏಕಕಾಲಕ್ಕೆ ಶೋಧ ಕಾರ್ಯ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ (Asset) ಪತ್ತೆ ಹಚ್ಚಿದ್ದಾರೆ.
ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಡಿಆರ್ ಕೋಆರ್ಡಿನೇಟರ್, ಪ್ರಾಧ್ಯಾಪಕ ಡಾ. ಪ್ರದೀಪ್ ಅವರಿಗೆ ಸೇರಿದ 6 ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲಾಗಿದೆ. ಒಟ್ಟು ₹6.34 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಾ. ಪ್ರದೀಪ್ ಬಳಿ ಏನೇನೆಲ್ಲ ಪತ್ತೆಯಾಯ್ತು?
ಒಟ್ಟು 5 ನಿವೇಶನ, 1 ವಾಸದ ಮನೆ, 16.7 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ₹4.45 ಕೋಟಿ.₹29.75 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, ದಾಳಿ ವೇಳೆ ₹10 ಸಾವಿರ ನಗದು ಪತ್ತೆ, ₹25 ಸಾವಿರ ವಿದೇಶ ಕರೆನ್ಸಿ ಸಿಕ್ಕಿದೆ.
₹34.75 ಲಕ್ಷ ಚಿನ್ನಾಭರಣ, ₹30 ಲಕ್ಷದ ವಾಹನಗಳು, ₹15.50 ಲಕ್ಷದ ಮೇಕೆ ಮತ್ತು ಹಸುಗಳು, ₹50 ಲಕ್ಷದ ಫಾರ್ಮ್ ಹೌಸ್, ₹28.75 ಲಕ್ಷದ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜವಾರಿ ಕೋಳಿ ಫಾರಂ, ಬಾತು ಕೋಳಿ, ಪಾರಿವಾಳ ಫಾರಂ, ಕುರಿ ಮತ್ತು ಗೋವುಗಳ ಫಾರಂಗಳು ಇವೆ. ಚಿನ್ನ 400 ಗ್ರಾಂ, ಬೆಳ್ಳಿ 3 ಕೆ.ಜಿ, 20 ವಾಚುಗಳು ಈ ಪೈಕಿ ಕೆಲವು ವಿದೇಶಿ ಬ್ರಾಂಡ್‌ಗಳಿವೆ, 50 ಶೂಗಳು, ಮೂರು ಕಾರು, ಮೂರು ಬೈಕ್‌ಗಳು ಪತ್ತೆಯಾಗಿವೆ.
ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ತುರ್ತು ಪರಿಸ್ಥಿತಿಗೆ 50 ವರ್ಷ, ಶಿವಮೊಗ್ಗದಲ್ಲಿ ಕರಾಳ ದಿನ, ಯಾವಾಗ? ಏನೆಲ್ಲ ಕಾರ್ಯಕ್ರಮ ಇರುತ್ತೆ?

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















