ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

ಸಾಗರ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ (Bridge) ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್‌ ಆಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ಭಾನುವಾರದಿಂದ ಬುಧವಾರದವರೆಗೆ ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ ನಡೆಸಲಾಯಿತು. ಲಾರಿಗಳಲ್ಲಿ ನೂರು ಟನ್‌ ಲೋಡ್‌ ತುಂಬಿ ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ.

Load-Test-of-Sigandur-Bridge-at-Sagara.

ಏನಿದು ಲೋಡ್‌ ಟೆಸ್ಟ್‌? ಹೇಗೆ ನಡೆಯಲಿದೆ?

ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರು ಭಾಗದಲ್ಲಿ 2.14 ಕಿ.ಮೀ ಉದ್ದದ ಸೇತುವೆ ನಿರ್ಮಿಸಲಾಗಿದೆ. ಇದು ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ. ಈ ಸೇತುವೆಯ ಕೇಬಲ್‌ ಭಾಗವನ್ನು ಎಕ್ಸ್‌ಟ್ರಾ ಡೋಸ್‌ ಪೋರ್ಷನ್‌, ಉಳಿದ ಭಾಗವನ್ನು ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಎಂದು ಕರೆಯಲಾಗುತ್ತದೆ. ಈಗ ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಭಾಗದಲ್ಲಿ ಲೋಡ್‌ ಟೆಸ್ಟಿಂಗ್‌ ನಡೆಸಲಾಗಿದೆ.

ಇದನ್ನೂ ಓದಿ » ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ

ಸೇತುವೆಯ ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಭಾಗದಲ್ಲಿ ಪ್ರತಿ ಸೆಗ್ಮೆಂಟ್‌ಗೆ 100 ಟನ್‌ ಭಾರ ಹೊರಿಸಲಾಗುತ್ತದೆ. ಮೊದಲಿಗೆ ಸೇತುವೆಯ ಮೊದಲ ಹಂತದಲ್ಲಿ 25 ಟನ್‌ ಭಾರ ಹೊರಿಸಲಾಗುತ್ತದೆ. ಅದೇ ಸ್ಥಳದಲ್ಲಿ ಪ್ರತಿ ಗಂಟೆಗೆ 25 ಟೆನ್‌ ಭಾರ ಹೆಚ್ಚಿಸಲಾಗುತ್ತದೆ. ನಾಲ್ಕು ಗಂಟೆಯಲ್ಲಿ 100 ಟನ್‌ ಭಾರ ಹೊರಿಸಲಾಗುತ್ತದೆ. ಪ್ರತಿ ಬಾರಿ ಭಾರ ಹೊರಿಸಿದಾಗಲು ಸೇತುವೆಯಲ್ಲಿ ಉಂಟಾಗುವ ವಿಚಲನವನ್ನು ವರದಿ ಮಾಡಿಕೊಳ್ಳಲಾಗುತ್ತದೆ.

ಲೋಡ್‌ ಟೆಸ್ಟ್‌ ಸಂದರ್ಭ ಸೇತುವೆಯಲ್ಲಿ 38 ಎಂ.ಎಂ. ವರೆಗೆ ವಿಚಲನೆಗೆ ಅವಕಾಶವಿದೆ. ಆದರೆ ಸಿಗಂದೂರು ಸೇತುವೆಯಲ್ಲಿ ಕೇವಲ 22 ಎಂ.ಎಂ. ವಿಚಲನ ಕಂಡು ಬಂದಿದೆ. ಈಗ ಹಂತ ಹಂತವಾಗಿ ಲೋಡ್‌ ತೆಗೆದಾಗ ವಿಚಲನ 0 ಎಂ.ಎಂ.ಗೆ ಬಂದಿದ್ದು, ಪರೀಕ್ಷೆ ಪಾಸಾಗಿದೆ. ನಮ್ಮ ಸೇತುವೆ ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದ್ದಾಗಿದೆ ಎಂಬುದು ಈ ಪರೀಕ್ಷೆಯಿಂದ ತಿಳಿದು ಬಂದಿದೆ.ಪೀರ್‌ ಪಾಷಾ, ಮುಖ್ಯ ಇಂಜಿನಿಯರ್‌

Load-Test-of-Sigandur-Bridge-at-Sagara.

ಮುಂದಿನ ವಾರ ಮತ್ತೊಂದು ಪರೀಕ್ಷೆ

ಮೊದಲ ಹಂತದ ಟೆಸ್ಟ್‌ನಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ. ಎರಡನೇ ಹಂತದ ಲೋಡ್‌ ಟೆಸ್ಟ್‌ಗೆ ಅನುಮತಿ ಕೇಳಲಾಗಿದೆ. ಕೇಬಲ್‌ ಇರುವ ಎಕ್ಸ್‌ಟ್ರಾ ಡೋಸ್‌ ಭಾಗದಲ್ಲಿ ಈ ಪರೀಕ್ಷೆ ನಡೆಯಲಿದೆ. ಈಗ ನಡೆಸಿರುವಂತೆ 100 ಟನ್‌ ಭಾರದ ಲೋಡ್‌ ಇರುವ ಲಾರಿಗಳನ್ನು ತಂದು ಕೇಬಲ್‌ ಇರುವ ಸೇತುವೆ ಭಾಗದಲ್ಲಿ ನಿಲ್ಲಿಸಿ ಪರೀಕ್ಷಿಸಲಾಗುತ್ತದೆ. ಮುಂದಿನ ವಾರ ಈ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹಿರಿಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆ ಸಂಸ್ಥೆಯವರ ಸಮ್ಮುಖದಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲ ಸೇತುವೆಗಳಿಗು ನಿಗದಿತ ಪರೀಕ್ಷೆ ಇರಲಿದೆ. ಅದರೆ ಇದು ವಿಶೇಷ ಸೇತುವೆ. ಆದ್ದರಿಂದ ಎರಡು ಬಗೆಯ ಲೋಡ್‌ ಟೆಸ್ಟ್‌ ಕಡ್ಡಾಯಗೊಳಿಸಲಾಗಿದೆ.ಪೀರ್‌ ಪಾಷಾ, ಮುಖ್ಯ ಇಂಜಿನಿಯರ್‌

ನೂರು ವರ್ಷ ಬಾಳಿಕೆ ಬರಲಿದೆ

ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆ ಹತ್ತು ವರ್ಷ ನಿರ್ವಹಣೆ ಮಾಡಲಿದೆ. ಆಮೇಲೆ ಪ್ರತಿ ಆರು ತಿಂಗಳಿಗೆ ಒಮ್ಮೆ ನಿರ್ವಹಣೆ ಕಾರ್ಯ ನಡೆಸಬೇಕು. ನಿಯಮಿತವಾಗಿ ನಿರ್ವಹಣೆ ಮಾಡಿದರೆ 100 ವರ್ಷವಾದರು ಸೇತುವೆಗೆ ಯಾವುದೆ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯ ಇಂಜಿನಿಯರ್‌ ಪೀರ್‌ ಪಾಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

423.15 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಿಸಲಾಗಿದೆ. 2.14 ಕಿ.ಮೀ ಉದ್ದದ ಸೇತುವೆಯು 16 ಮೀಟರ್‌ ಅಗಲದ ದ್ವಿಪಥ ಹೊಂದಿದೆ. ಎರಡು ಕಡೆ 1.5 ಮೀಟರ್‌ ಅಗಲದ ಫುಟ್‌ ಪಾತ್‌ ಕೂಡ ಇದೆ.

https://chat.whatsapp.com/JPJ0lTQsTKf365Fqu6Q7cd

ಹೆಚ್ಚಿನ Shimoga News, Shivamogga News ಮತ್ತು SAGARA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜೂನ್ 25, 2025

Leave a Comment