ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ, ಶಿವಮೊಗ್ಗದಲ್ಲಿ ಕೇಸ್‌

ಶಿವಮೊಗ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಬೇರೊಬ್ಬಳ ಜೊತೆಗೆ ವಿವಾಹಕ್ಕೆ (Marriage) ಸಿದ್ಧವಾಗಿದ್ದ ಯುವಕನ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರ ಯುವತಿಗೆ (ಹೆಸರು ಗೌಪ್ಯ) ಆಕೆಯ ದೂರದ ಸಂಬಂಧಿಯೊಬ್ಬನ ಪರಿಚಯವಾಗಿ, ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಶಿವಮೊಗ್ಗದಲ್ಲಿಯೇ ಕೆಲಸ ಮಾಡುವಂತೆ ಮನವೊಲಿಸಿದ್ದ ಯುವಕ ಇಲ್ಲಿಗೆ ಕರೆಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಬೆಂಗಳೂರಿನಿಂದ ಬಂದ ರಾತ್ರಿ ಎನ್‌.ಟಿ.ರಸ್ತೆಯ ಲಾಡ್ಜ್‌ ಒಂದರಲ್ಲಿ ರೂಂ ಮಾಡಿಕೊಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಲಾಡ್ಜ್‌ನಲ್ಲಿ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿ ಶಿವಮೊಗ್ಗದಲ್ಲಿಯೇ ಕೆಲಸ ಆರಂಭಿಸಿದ್ದು, ಸ್ನೇಹಿತೆಯೊಂದಿಗೆ ರೂಮ್‌ ಮಾಡಿಕೊಂಡಿದ್ದಳು. ಸ್ನೇಹಿತೆ ಇಲ್ಲದ ಸಂದರ್ಭ ಯುವತಿಯ ರೂಂಗೆ ತೆರಳುತ್ತಿದ್ದ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ. ಕೊನೆಗೆ ಬೇರೊಬ್ಬ ಯುವತಿ ಜೊತೆಗೆ ಮದುವೆ ಸಿದ್ಧವಾಗಿದ್ದ. ಈ ಹಿನ್ನೆಲೆ ಯುವತಿ ನೀಡಿದ ದೂರಿನ ಹಿನ್ನೆಲೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಕಾಯ್ದೆ 69ರ ಅಡಿ ಪ್ರಕರಣ ದಾಖಲಾಗಿದೆ.

https://chat.whatsapp.com/JPJ0lTQsTKf365Fqu6Q7cd

Crime-News-General-Image

Leave a Comment