ಏರ್‌ಟೆಲ್‌ ಪ್ರೀಪೇಯ್ಡ್‌ ₹189ನ ಹೊಸ ರೀಚಾರ್ಜ್‌ ಪ್ಲಾನ್‌, ಏನೆಲ್ಲ ವಿಶೇಷತೆ ಇದೆ?

ಟೆಲಿಕಾಂ ನ್ಯೂಸ್‌: ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಏರ್‌ಟೆಲ್‌ ಹೊಸ ₹189 ರೀಚಾರ್ಜ್ ಪ್ಲಾನ್ (Plan) ಅನ್ನು ಪರಿಚಯಿಸಿದೆ. ಇದು ಸೀಮಿತ ಬಳಕೆದಾರರಿಗೆ ವಿನ್ಯಾಸಗೊಳಿಸಲಾದ ಪ್ಯಾಕ್ ಆಗಿದೆ.

ಇದನ್ನೂ ಓದಿ » ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ

ಈ ಪ್ಯಾಕ್‌ 21 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್, 1GB ಡೇಟಾ ಮತ್ತು 300 SMS ಹೊಂದಿರಲಿದೆ. ಈ ಪ್ಲಾನ್ ಪ್ರಾಥಮಿಕವಾಗಿ ಕಾಲಿಂಗ್ ಮತ್ತು ಮೆಸೇಜಿಂಗ್ ಅಗತ್ಯವಿರುವವರಿಗಾಗಿ ಅನುಕೂಲ. ವಿಡಿಯೋ ಸ್ಟ್ರೀಮಿಂಗ್ ಅಥವಾ ಹೆಚ್ಚು ಡೇಟಾ ಬಳಕೆದಾರರಿಗೆ ಸೂಕ್ತವಲ್ಲ.

Airtel

ಈ ಪ್ಲಾನ್‌ಗಿಂತಲು ₹10 ಹೆಚ್ಚು ಪಾವತಿಸಿದರೆ 7 ದಿನ ಹೆಚ್ಚುವರಿ ವ್ಯಾಲಿಡಿಟಿಯ ಪ್ಯಾಕ್‌ ದೊರೆಯಲಿದೆ. ₹199 ಪ್ಲಾನ್‌ಗೆ 28 ದಿನಗಳು ವ್ಯಾಲಿಡಿಟಿ, 1GB ಡೇಟಾ, ಪ್ರತಿದಿನ 100 SMS ಸಿಗಲಿದೆ.

ಹೊಸ ಪ್ಲಾನ್ ಈಗಾಗಲೇ ಏರ್‌ಟೆಲ್‌ ಆಪ್‌ ಅಥವಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶ ಮತ್ತು ಸೆಕೆಂಡರಿ SIM ಬಳಕೆದಾರರನ್ನು ಗುರಿಯಾಗಿರಿಸಿದೆ ಈ ಪ್ಲಾನ್‌ ಬಿಡುಗಡೆ ಮಾಡಲಾಗಿದೆ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : July 15, 2025 at 9:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜುಲೈ 15, 2025

Leave a Comment