ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಲಾಂಚ್‌ಗಳನ್ನು (Launch) ಇನ್ಮುಂದೆ ಹೊಟೇಲ್ ಆಗಿ ಪರಿವರ್ತಿಸುವ ಯೋಜನೆ ಇದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ‌.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ » ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಸೇತುವೆ ಉದ್ಘಾಟನೆಯಾಗಿದೆ. ಹಾಗಾಗಿ ಇಲ್ಲಿನ ಎರಡು ಲಾಂಚ್‌ಗಳಲ್ಲಿ ಹೊಟೇಲ್ ನಿರ್ಮಿಸುವ ಯೋಜನೆ ಇದೆ. ಬೋಟ್‌ಗಳಲ್ಲಿ ಲಾಂಚ್ ಬಳಿಗೆ ಜನರನ್ನು ಕರೆದೊಯ್ದು ಊಟ, ತಿಂಡಿಗೆ ವ್ಯವಸ್ಥೆ ಮಾಡುವ ಯೋಚನೆ ಇದೆ. ಒಂದು ಲಾಂಚ್‌ನಲ್ಲಿ ಸಸ್ಯಾಹಾರ, ಮತ್ತೊಂದರಲ್ಲಿ ಮಾಂಸಾಹಾರಕ್ಕೆ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದರು.

Beluru-Gopalakrishna-in-a-press-meet

ಈ ಕುರಿತು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ಹಣಕಾಸು ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ಈ ಭಾಗದ ಯಾವುದಾದರೂ ನಡುಗಡ್ಡೆಯಲ್ಲಿ ಅವಕಾಶ ಕಲ್ಪಿಸಿದರೆ ಅಲ್ಲಿಯು ಜನ ಕುಳಿತು ಸಮಯ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಇಲ್ಲಿ ಮದ್ಯ ಸೇವನೆಗೆ ಅವಕಾಶ ಇರುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಜೋಗ ಸೇರಿದಂತೆ ಸುತ್ತಮುತ್ತಲು ಪ್ರವಾಸಕ್ಕೆ ಬಂದವರು ಇಲ್ಲಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಪ್ರಮುಖರಾದ ಶಿ.ಜು.ಪಾಷಾ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment