ಗೂಗಲ್‌ ಪೇ, ಫೋನ್‌ ಪೇಗೆ ನೊಟೀಸ್‌, ಶಿವಮೊಗ್ಗದ ವ್ಯಾಪಾರಿಗಳಿಗೆ ಢವಢವ, ಸದ್ಯ ಹೇಗಿದೆ ಪರಿಸ್ಥಿತಿ?

ಶಿವಮೊಗ್ಗ: UPI ಬಳಸುತ್ತಿರುವ ಬೆಂಗಳೂರಿನ ಸಾವಿರಾರು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೊಟೀಸ್‌ ಜಾರಿ ಮಾಡಿದೆ. ಇದರ ಬೆನ್ನಿಗೆ ಶಿವಮೊಗ್ಗದಲ್ಲಿಯು ವ್ಯಾಪಾರಿಗಳಲ್ಲಿ ಗೊಂದಲ, ಆತಂಕ ಮೂಡಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ವ್ಯಾಪಾರಿಗಳು ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಪಾರ ಆರಂಭಿಸುತ್ತಿದ್ದಾರೆ.

ಇದನ್ನೂ ಓದಿ » ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ

ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?

» ಪರಿಸ್ಥಿತಿ 1: ಕೆಲವು ವ್ಯಾಪಾರಿಗಳು ಯು.ಪಿ.ಐ ಬಳಕೆಗೆ ಮಿತಿ ವಿಧಿಸುತ್ತಿದ್ದಾರೆ. ನಗದು ಮೂಲಕವೆ ವ್ಯಾಪಾರ ಮಾಡುತ್ತಿದ್ದಾರೆ. ತೀರಾ ಹಣವೇ ಇಲ್ಲ ಎಂದವರಿಂದ ಅನಿವಾರ್ಯವಾಗಿ ಯು.ಪಿ.ಐ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.

» ಪರಿಸ್ಥಿತಿ 2: ಒಂದಷ್ಟು ವ್ಯಾಪಾರಿಗಳು ನಗದು ಮೂಲಕವೇ ವ್ಯಾಪಾರ ನಡೆಸುತ್ತೇವೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ. ಗೂಗಲ್‌ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್‌ ಹಾಕಿದ್ದಾರೆ.

» ಪರಿಸ್ಥಿತಿ 3: ಗೂಗಲ್‌ ಪೇಯನ್ನು ಒಬ್ಬರ ಹೆಸರಿನ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವುದು, ಫೋನ್‌ ಪೇಯನ್ನು ಮತ್ತೊಬ್ಬರ ಹೆಸರಿನ ಖಾತೆಗೆ ಲಿಂಕ್‌ ಮಾಡುವುದು. ಒಂದೇ ಬ್ಯಾಂಕ್‌ ಖಾತೆಗೆ ಹೆಚ್ಚಿನ ಮೊತ್ತ ಸೇರದಂತೆ ತಡೆಯಬಹುದು.

google-pay-phone-pay-scanner - UPI

ನಾವು ಮೂರು ಸ್ಕ್ಯಾನರ್‌ ಬಳಕೆ ಮಾಡುತ್ತಿದ್ದೇವೆ. ಒಂದೇ ಬ್ಯಾಂಕ್‌ ಖಾತೆಗೆ ಹೆಚ್ಚಿನ ಆದಾಯ ಸೇರುವುದನ್ನು ತಡೆಯತ್ತಿದ್ದೇವೆ. ನಮ್ಮಲ್ಲಿ ಒಂದು ಲಕ್ಷ ವ್ಯಾಪಾರವಾದರೆ ಐದಾರು ಸಾವಿರದ ಲಾಭ ಇರುತ್ತದೆ. ಆದರೆ ತೆರಿಗೆ ಅಧಿಕಾರಿಗಳು ಒಂದು ಲಕ್ಷ ಲಾಭವಾಗಿದೆ ಎಂದು ಭಾವಿಸುತ್ತಾರೆ. ಇಲ್ಲಿನ ಖರ್ಚು, ವೆಚ್ಚಗಳು ಅವರಿಗೆ ಲೆಕ್ಕಕ್ಕೆ ಬರುವುದಿಲ್ಲ.ತರಕಾರಿ ವ್ಯಾಪಾರಿ (ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಾಪಾರಿ)

65 ಸಾವಿರ ವರ್ತಕರ ಮಾಹಿತಿ

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ 65 ಸಾವಿರ ವರ್ತಕರ ಮಾಹಿತಿಯನ್ನು ಯು.ಪಿ.ಐ ಪ್ಲಾಟ್‌ಫಾರಂಗಳಿಂದ ಪಡೆದುಕೊಂಡಿದ್ದಾರೆ. ಈ ಪೈಕಿ 15 ಸಾವಿರ ವರ್ತಕರಿಗೆ ನೊಟೀಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಸುಮಾರು 6 ಸಾವಿರ ವರ್ತಕರಿಗೆ ನೊಟೀಸ್‌ ನೀಡಲಾಗಿದೆ. ಕೆಲವರಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ.

June-2025-Report-Shivamogga-Live-New-New.

ಇನ್ನು, ಈ ವ್ಯಾಪಾರಿಗಳಿಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯ ಗೊಂದಲದಲ್ಲಿರುವ ವರ್ತಕರು ಮುಂದಿನ ಬೆಳವಣಿಗೆ ಬಗ್ಗೆ ಗಮನ ನೆಟ್ಟಿದ್ದಾರೆ. ನೊಟೀಸ್‌, ದಂಡದ ಅಸ್ತ್ರದಿಂದ ಪಾರಾಗುವ ಮಾರ್ಗದತ್ತ ಯೋಚಿಸುತ್ತಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment