ಶಿವಮೊಗ್ಗ: ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದ ವಕೀಲರೊಬ್ಬರ (Advocate) ಮೇಲೆ ಮೂವರು ದುಷ್ಕರ್ಮಿಗಳು ದಾಳಿ ಮಾಡಿ ಅವರ ಬ್ಯಾಗ್ ಕಸಿದುಕೊಂಡಿದ್ದಾರೆ. ಅದರಲ್ಲಿ ಮೊಬೈಲ್, ವಕೀಲರ ಕೋಟ್ ಮತ್ತು ನಗದು ಇತ್ತು ಆರೋಪಿಸಲಾಗಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ
ವಕೀಲ ಅಶೋಕ್ ಅವರು ಜೂನ್ 18ರಂದು ಬೆಂಗಳೂರಿನ ಹೈಕೋರ್ಟ್ಗೆ ತೆರಳಬೇಕಿತ್ತು. ಹಾಗಾಗಿ ಬೆಳಗ್ಗೆ ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದರು. ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ವಕೀಲ ಅಶೋಕ್ ಅವರನ್ನು ಮೂವರು ದುಷ್ಕರ್ಮಿಗಳು ಹಿಂಬದಿಯಿಂದ ಹಿಡಿದುಕೊಂಡಿದ್ದಾರೆ ಎಂದು ಅರೋಪಿಸಲಾಗಿದೆ.

ಈ ವೇಳೆ ಅಶೋಕ್ ಅವರ ಕಣ್ಣಿಗೆ ಹೊಡೆದಿದ್ದಾರೆ. ಅವರ ಬಳಿ ಇದ್ದ ಬ್ಯಾಗ್ ಕಸಿದುಕೊಂಡಿದ್ದಾರೆ. ಅದರಲ್ಲಿ ₹4000 ನಗದು, ಮೊಬೈಲ್ ಫೋನ್, ಕೋಟ್ ಇತ್ತು ದೂರಿನಲ್ಲಿ ತಿಳಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತಡವಾಗಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Attack On Advocate
