ಶಿವಮೊಗ್ಗದಲ್ಲಿ ಮೂರು ದಿನ ರಾಷ್ಟ್ರೀಯ ನೃತ್ಯ ಮಹೋತ್ಸವ, ಏನೆಲ್ಲ ಕಾರ್ಯಕ್ರಮ ಇರಲಿದೆ?

ಶಿವಮೊಗ್ಗ: ನಗರದ ಸಹಚೇತನ ನಾಟ್ಯಾಲಯ ಆ.22ರಿಂದ ಮೂರು ದಿನಗಳ ಕಾಲ ‘ನಾಟ್ಯಾರಾಧನಾ 14′ ರಾಷ್ಟ್ರೀಯ ನೃತ್ಯ (Dance) ಮಹೋತ್ಸವವನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ನಾಟ್ಯಾಲಯದ ಕಾರ್ಯದರ್ಶಿ ಸಹನಾ ಚೇತನ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹನಾ ಚೇತನ್, ಆ.22ರಂದು ಸಂಜೆ ನಾಟ್ಯಾಲಯದ ವಿದ್ಯಾರ್ಥಿಗಳು ಸಂತ ಕವಿಗಳ ಭಕ್ತಿ ಗೀತೆಗಳಿಗೆ ಭಕ್ತಿ ಸುಧಾರಸ ನೃತ್ಯ ಮಾಡಲಿದ್ದಾರೆ. ರಾತ್ರಿ 7ಕ್ಕೆ ಶ್ರೀ ಗುರುಗುಹ ಸಂಗೀತ ವಿದ್ಯಾಲಯದ ಶೃಂಗೇರಿ ಹೆಚ್. ಎಸ್.ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾಟ್ಯಾಲಯದ ಗೌರವಾಧ್ಯಕ್ಷ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಹನಾ ಚೇತನ್ ಉಪಸ್ಥಿತರಿರುತ್ತಾರೆ ಎಂದರು.

Sahana-Chetan-of-sahachetana-natyalaya

ಆ.23ರಂದು ಸಂಜೆ 6.30ಕ್ಕೆ ಜಯದೇವ ಅಷ್ಟಪದಿಯ ಶೃಂಗಾರ ಮಾಲಿಕೆ ರಾಧಾ ಮಾಧವ ವಿಲಾಸವನ್ನು ನೃತ್ಯಗುರು ಸಹನಾ ಚೇತನ್ ಏಕವ್ಯಕ್ತಿ ನೃತ್ಯದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಸಂಜೆ 7ಕ್ಕೆ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಅಭಂಗ್ ವಾಣಿ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ‍್ಯಾಂಕ್‌, ಏನಿದು ರ‍್ಯಾಂಕಿಂಗ್‌? ವಿವಿ ಪಡೆದ ಅಂಕಗಳೆಷ್ಟು?

ಆ.24ರಂದು ಸಂಜೆ 6.30ಕ್ಕೆ ಒಡಿಶಾದ ರುದ್ರಾಕ್ಟ್ ಫೌಂಡೇಶನ್ ಒಡಿಸ್ಸಿ ನೃತ್ಯ ಪ್ರದರ್ಶಿಸಲಿದೆ. ಸಂಜೆ 7ಕ್ಕೆ ಸಮಾರೋಪ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್ ಆಗಮಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7.30ಕ್ಕೆ ಅಸ್ಸಾಂನ ರಂಗಧಾಲಿ ಡ್ಯಾನ್ಸ್ ಗ್ರೂಪ್ ಬಿಹು ನೃತ್ಯ ಪ್ರದರ್ಶಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ನಾಗವೇಣಿ, ವಿನಯ್‌ ಶಿವಮೊಗ್ಗ, ಚೇತನ್‌ ಉಪಸ್ಥಿತರಿದ್ದರು.

National Level dance event in Shimoga

Sahana-Chetan-of-sahachetana-natyalaya

Leave a Comment