ಶಿವಮೊಗ್ಗದ ಹೂವಿನ ಮಾರುಕಟ್ಟೆಯಿಂದ ಹಿಂತಿರುಗಿದ ನ್ಯಾಮತಿಯ ವ್ಯಕ್ತಿ ಕಾದಿತ್ತು ಶಾಕ್‌, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜನನಿಬಿಡ ಪ್ರದೇಶದಲ್ಲಿಯೇ ಪಾರ್ಕಿಂಗ್‌ ಮಾಡಿದ್ದ ಬೈಕ್‌ (Bike) ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಎ.ಕೆ.ಕಾಲೋನಿಯ ಸಂತೋಷ್‌ ಎಂಬುವವರು ತಮ್ಮ ಸಂಬಂಧಿಯ ಬೈಕ್‌ ತೆಗೆದುಕೊಂಡು ಶಿವಮೊಗ್ಗಕ್ಕೆ ಬಂದಿದ್ದರು. ಶಿವಪ್ಪನಾಯಕ ಪ್ರತಿಮೆ ಸಮೀಪ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದರು. ಹೂವಿನ ಮಾರುಕಟ್ಟೆಗೆ ಹೋಗಿ ಹಿಂತಿರುಗುವಷ್ಟರಲ್ಲಿ ಬೈಕ್‌ ನಾಪತ್ತೆಯಾಗಿತ್ತು.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಪೊಲೀಸರ ರೂಟ್‌ ಮಾರ್ಚ್‌, ಎಲ್ಲೆಲ್ಲಿ ಸಾಗಿತು ಪಥಸಂಚಲನ?

ಎಲ್ಲೆಡೆ ಹುಡುಕಿದ ಸಂತೋಷ್‌ ಬಳಿಕ ದೂರು ನೀಡಿದ್ದಾರೆ. ಮಧ್ಯಾಹ್ನ 12.45ಕ್ಕೆ ನಿಲ್ಲಿಸಿದ್ದ ಹೆಚ್.ಎಫ್‌.100 ಬೈಕ್‌ ಕಳುವಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bike theft near gandhi bazaar

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment