ಭದ್ರಾವತಿಯಲ್ಲಿ ಚಿನ್ನಾಭರಣ ಕಳ್ಳತನ, ಬೆಂಗಳೂರು ಕೆಂಗೇರಿಯ ಮಹಿಳೆ ಸೇರಿ ಇಬ್ಬರ ಬಂಧನ

ಭದ್ರಾವತಿ: ಮನೆಯ ಬೀರುವಿನಲ್ಲಿದ್ದ 95 ಗ್ರಾಂ ಬಂಗಾರದ ಆಭರಣ ಕಳವು ಮಾಡಿದ್ದ ಇಬ್ಬರನ್ನು ಪೇಪರ್‌ ಟೌನ್‌ ಪೊಲೀಸರು ಬಂಧಿಸಿದ್ದಾರೆ (Arrest). ಇವರಿಂದ ₹7.82 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಬೆಂಗಳೂರಿನ ಕೆಂಗೇರಿ ನಿವಾಸಿ ಆರ್.ಮಂಜುಳಾ(21) ಮತ್ತು ಸುಜೈನ್ ಖಾನ್ (24 ) ಬಂಧಿತರು. ಕಳೆದ ಆ.18ರಂದು ಭದ್ರಾವತಿಯ ಐದನೇ ವಾರ್ಡ್‌ನ ಚಂದ್ರಮ್ಮ ಎಂಬುವರ ಮನೆಗೆ ಬಂದಿದ್ದ ಇವರು ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು.

ಈ ಬಗ್ಗೆ ಚಂದ್ರಮ್ಮ ಅವರು ಪೇಪರ್ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಭದ್ರಾವತಿ ಡಿವೈಎಸ್ಪಿ ಕೆ.ಆರ್.ನಾಗರಾಜ ಅವರ ಮೇಲ್ವಿಚಾರಣೆಯಲ್ಲಿ ಪೇಪರ್‌ಟೌನ್ ಠಾಣೆ ಇನ್ಸ್‌ಪೆಕ್ಟರ್ ಕೆ.ನಾಗಮ್ಮ ನೇತೃತ್ವದಲ್ಲಿ ಸಿಬ್ಬಂದಿ ರತ್ನಾಕ‌ರ್, ಪ್ರಕಾಶ, ಅರುಣ್, ನಾಗರಾಜ, ಹನುಮಂತ, ಅನುರೂಪಾ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

New-town-police-nab-two-from-kengeri - Arrest

ಇದನ್ನೂ ಓದಿ » ಶಿವಮೊಗ್ಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

New-town-police-nab-two-from-kengeri

Leave a Comment