ಶಿವಮೊಗ್ಗ ಲೈವ್
ಸೊರಬ: ಸಾಲದ ಕಂತು ಕಟ್ಟದ್ದಕ್ಕೆ ವ್ಯಕ್ತಿಯೊಬ್ಬರನ್ನು ಮನೆಯೊಳಗೆ ಕೂಡಿ ಹಾಕಿದ ಫೈನಾನ್ಸ್ (finance) ಸಂಸ್ಥೆಯ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸೊರಬ ತಾಲೂಕು ಆನವಟ್ಟಿಯ ಜೆ.ಸಿ. ಬಡಾವಣೆಯ ಮಂಜುನಾಥ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಮಂಜುನಾಥ ಅವರ ತಾಯಿ ಫೈನಾನ್ಸ್ ಸಂಸ್ಥೆಯಿಂದ ₹11 ಲಕ್ಷ ಗೃಹ ಸಾಲ ಪಡೆದಿದ್ದರು. ಒಂದು ವರ್ಷದ ಹಿಂದೆ ಅವರ ತಾಯಿ ತೀರಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಚೆಗೆ ಮನೆ ಬಳಿಗೆ ಬಂದ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ, ಮಂಜುನಾಥ ಅವರನ್ನು ಮನೆಯೊಳಗೆ ತಳ್ಳಿ, ಬಾಗಿಲು ಹಾಕಿ ಕೂಡಿ ಹಾಕಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಬಂದೂಕು, ಮದ್ದು – ಗುಂಡು, ಕಾರು ಸಹಿತ ಕಾಡಿನಲ್ಲಿ ಮೂವರು ಅರೆಸ್ಟ್, ಮತ್ತಿಬ್ಬರು ಎಸ್ಕೇಪ್
case filed against finance institute officers

ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: