ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು, ಈತ ಮಾಡಿದ ಅಪರಾಧವೇನು?

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ವಿವಾಹವಾಗಿದ್ದ 19 ವರ್ಷದ ಯುವಕನಿಗೆ (Youth) 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ?

19 ವರ್ಷದ ಯುವಕನೊಬ್ಬ 2022ರಲ್ಲಿ ಭದ್ರಾವತಿ ತಾಲೂಕಿನ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮದುವೆಯಾಗಿದ್ದ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲಕಿ ದೂರು ನೀಡಿದ್ದಳು. ತನಿಖೆ ನಡೆಸಿದ ಆಗಿನ ಇನ್ಸ್‌ಪೆಕ್ಟರ್‌ ಅಭಯ ಪ್ರಕಾಶ್‌ ಸೋಮನಾಳ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್‌ ಯುವಕನಿಗೆ ಪೋಕ್ಸೋ ಕಾಯ್ದೆ ಸೆಕ್ಷನ್‌ 6ರ ಪ್ರಕಾರ 20 ವರ್ಷ ಜೈಲು ಶಿಕ್ಷೆ, ₹50,000 ದಂಡ ವಿಧಿಸಿದ್ದಾರೆ. ಆರೋಪಿಯಿಂದ ₹80,000 ದಂಡದ ಮೊತ್ತವನ್ನು ನೊಂದ ಬಾಲಕಿಗೆ ನೀಡಬೇಕು. ಇನ್ನು, ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ₹4 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀಧರ್.ಹೆಚ್‌.ಆರ್‌ ವಾದ ಮಂಡಿಸಿದ್ದರು.

Shivamogga-Court-Balaraja-Urs-Road

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗ ದಸರಾ, ಇವತ್ತು ಏನೇನೆಲ್ಲ ಕಾರ್ಯಕ್ರಮಗಳಿವೆ? ಎಲ್ಲೆಲ್ಲಿ ನಡೆಯುತ್ತೆ?

Youth sentenced for 20 years jail

Shivamogga-Court-Balaraja-Urs-Road

Leave a Comment