ಸಿಗಂದೂರು ರಸ್ತೆಯಲ್ಲಿ ಟಿಟಿ ಪಲ್ಟಿ, ಬೆಂಗಳೂರಿನ ಮಹಿಳೆಯರಿಗೆ ಗಾಯ, ಆಸ್ಪತ್ರೆಗೆ MLA ದೌಡು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಟ್ರಾವಲರ್‌ ವಾಹನ ಪಲ್ಟಿಯಾಗಿ ಸಿಗಂದೂರು (Sigandur) ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕೂರನಕೊಪ್ಪ ಸಮೀಪ ಇಂದು ಬೆಳಗ್ಗೆ ಅಪಘಾತವಾಗಿದೆ.

ಬೆಂಗಳೂರಿನಿಂದ ಆಗಮಿಸಿದ್ದ 12 ಮಹಿಳೆಯರು ಟಿಟಿ ವಾಹನದಲ್ಲಿ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದರು. ಕೂರನಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಗಾಯಾಳುಗಳನ್ನು ಕೂಡಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇನ್ನು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮೂವರು ಮಹಿಳೆಯರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರಿನಿಂದ ಬೆಳಗ್ಗೆ ಬಂದಿದ್ದರು

ಬೆಂಗಳೂರಿನಿಂದ 12 ಮಹಿಳೆಯರು ರೈಲಿನಲ್ಲಿ ಇಂದು ಬೆಳಗ್ಗೆ ಸಾಗರಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಟಿಟಿ ವಾಹನ ಬಾಡಿಗೆಗೆ ಪಡೆದು ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ.

280925-Tempo-Traveller-Incident-at-Sigandur-road-near-Kuranakoppa.webp
ಟೆಂಪೊ ಟ್ರಾವಲರ್‌ ವಾಹನ ಪಲ್ಟಿ.

ಆಸ್ಪತ್ರೆಗೆ ಎಂಎಲ್‌ಎ ದೌಡು

ಇನ್ನು, ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ದೌಡಾಯಿಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಅಲ್ಲದೆ ತುರ್ತು ಆಂಬುಲೆನ್ಸ್‌ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲು ನೆರವಾದರು.

sigandur tt incident
ಸಾಗರ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ.

ಸಾಗರದ ಟಿಟಿ ಮಾಡಿಕೊಂಡು ಸಿಗಂದೂರಿಗೆ ಹೊರಟಿದ್ದರು. ಟಿಟಿ ಪಲ್ಟಿಯಾಗಿದೆ. ಕೆಲವರಿಗೆ ತಲೆಗೆ, ಕೈಗೆ, ಕುತ್ತಿಗೆ ಗಾಯವಾಗಿದೆ. ಅವರನ್ನೆಲ್ಲ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ರವಾನಿಸಿದ್ದೇವೆ. ಉಳಿದವರಿಗೆ ಇಲ್ಲಿಯೆ ಚಿಕಿತ್ಸೆ ನಡೆಯುತ್ತಿದೆ. ಯಾರಿಗೂ ಯಾವುದೇ ಸಮಸ್ಯೆ ಆಗಬಾರದು.

  • ಬೇಳೂರು ಗೋಪಾಲಕೃಷ್ಣ, ಶಾಸಕ

RED-LINE-

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Sigandur TT Incident
ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ.

ಇದನ್ನೂ ಓದಿ »‘ಎಲ್ಲ ಸಮಸ್ಯೆ ಪರಿಹಾರವಾಗಿದೆ, ನಿಗದಿತ ಸಮಯದಲ್ಲೆ ಪೂರ್ಣ ಆಗುತ್ತೆʼ, ಶಿವಮೊಗ್ಗದಲ್ಲಿ ಮಿನಿಸ್ಟರ್‌ ಏನೆಲ್ಲ ಹೇಳಿದರು?

Sigandur

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 28, 2025

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

Leave a Comment