ಶಿವಮೊಗ್ಗ ಸಿಟಿಯಲ್ಲಿ ಕರೆಂಟ್‌ ಕಂಬಗಳ ತೆರವಿಗೆ ಒತ್ತಾಯ, ಡಿಸಿ ಕಚೇರಿ ಮುಂಭಾಗ ಹೋರಾಟ

ಶಿವಮೊಗ್ಗ: ಸಿಟಿಯಲ್ಲಿ ಭೂಗತ ಕೇಬಲ್ ಅಳವಡಿಸಿದ್ದರೂ ವಿದ್ಯುತ್ ಕಂಬಗಳನ್ನು (Electric Pole) ತೆರವು ಮಾಡದೇ ಇರುವುದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮೆಸ್ಕಾಂ ಮತ್ತು ಸ್ಮಾರ್ಟ್‌ ವತಿಯಿಂದ ಸುಮಾರು ₹300 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಸಿಟಿಯಲ್ಲಿ ಭೂಗತ ಕೇಬಲ್ ಅಳವಡಿಸಲಾಗಿದೆ. ಹೀಗಿದ್ದೂ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯದೆ ಹಾಗೆ ಬಿಟ್ಟಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ವಿದ್ಯುತ್ ಕಂಬಗಳಿಂದಾಗಿ ವಾಹನ ಸಂಚಾರಕ್ಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.

ವೇಳಾಪಟ್ಟಿ ನಿಗದಿಪಡಿಸಿಕೊಂಡು ಕಂಬ ತೆರವು ಮಾಡಿ

ವಿದ್ಯುತ್‌ ಕಂಬಗಳನ್ನು ತೆರವು ಮಾಡುವ ಸಲುವಾಗಿ ಅಧಿಕಾರಿಗಳ ಸಭೆ ಕರೆಯಬೇಕು. ವೇಳಾಪಟ್ಟಿ ನಿಗದಿಪಡಿಸಿಕೊಂಡು ಹಳೆಯ ವಿದ್ಯುತ್ ಕಂಬಗಳನ್ನು ತೆರವು ಮಾಡಬೇಕು. ಸಮಸ್ಯೆ ಬಗೆಹರಿಯದೆ ಇದ್ದರೆ ಹೋರಾಟದ ಸ್ವರೂಪ ಬದಲಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

091025-Protest-to-remove-electric-poles-from-shimoga-city.webp

ಪ್ರಮುಖರಾದ ಕೆ.ವಿ. ವಸಂತ್‌ಕುಮಾ‌ರ್, ಸತೀಶ್ ಕುಮಾರ್‌ ಶೆಟ್ಟಿ, ಅಶೋಕ್‌ಕುಮಾರ್, ಸೀತಾರಾಮ್, ಜನಮೇಜಿರಾವ್, ಡಾ. ಶ್ರೀನಿವಾಸ್, ಚನ್ನವೀರಪ್ಪ ಗಾಮನಗಟ್ಟಿ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದ ಗೇಟ್‌ ಮುಂದೆ ಪೆಂಡಾಲ್‌ ಹಾಕಿ ರೈತರ ಧರಣಿ, ಇಲ್ಲಿದೆ ಕಾರಣ

Electric Pole

Leave a Comment