ಶಿವಮೊಗ್ಗ: RSS ಶತಮಾನೋತ್ಸವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಇವತ್ತು ವೈಭವದ ಪಥಸಂಚಲನ ನಡೆಯಿತು. ಸುಮಾರು ಐದು ಸಾವಿರ ಕಾರ್ಯಕರ್ತರು ಪಥ ಸಂಚಲನದಲ್ಲಿ (Route March) ಪಾಲ್ಗೊಂಡಿದ್ದರು.
ಕೋಟೆ ರಸ್ತೆಯ ಜೈನ್ ಸಮುದಾಯ ಭವನದ ಬಳಿ ಸಂಘಟನೆಯ ಧ್ವಜ ಪ್ರಮುಖ ಕೋ.ನಂ.ರವೀಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಕ್ಕೆ ನಮನ ಸಲ್ಲಿಸಿದ ಬಳಿಕ ಪಥ ಸಂಚಲನ ಆರಂಭವಾಯಿತು.
ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಮೂರ್ತಿ ಪ್ರತಿಮೆ, ಎ.ಎ.ಸರ್ಕಲ್, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಜೈಲ್ ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿತು. ಮೆರವಣಿಗೆ ಹಾದಿ ಉದ್ದಕ್ಕು ರಸ್ತೆಯ ಇಕ್ಕೆಲದಲ್ಲಿ ಸಾರ್ವಜನಿಕರು ನಿಂತಿದ್ದರು. ರಂಗೋಲೆ ಹಾಕಿ, ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿ ಪಥ ಸಂಚಲನವನ್ನು ಸ್ವಾಗತಿಸಿದರು.