ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಆರ್‌ಎಸ್‌ಎಸ್ ಪಥ ಸಂಚಲನದ (Route March) ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ಅಲಂಕಾರ ಮಾಡಲಾಗಿದೆ. ಮಹಾದ್ವಾರ, ಪ್ರಮುಖ ವೃತ್ತಗಳಲ್ಲಿ ರಂಗೋಲೆ ಬಿಡಿಸಲಾಗಿದೆ.
ಎಲ್ಲೆಲ್ಲಿ ಏನೇನು ಅಲಂಕಾರ?
ಗಾಂಧಿ ಬಜಾರ್ ಕೇಸರಿಮಯವಾಗಿದೆ. ಮಹಾದ್ವಾರ ನಿರ್ಮಿಸಲಾಗಿದೆ. ಶಿವಪ್ಪನಾಯಕ ಪ್ರತಿಮೆ ಎದುರು ಮಂಟಪ ನಿರ್ಮಿಸಿ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್, ಎರಡನೇ ಸರಸಂಘ ಚಾಲಕ ಎಂ.ಎಸ್.ಗೋಲ್ವಾಲ್ಕರ್ ಭಾವಚಿತ್ರಗಳನ್ನು ಇರಿಸಲಾಗಿದೆ. ಅದರ ಮುಂಭಾಗದಲ್ಲಿಯು ರಂಗೋಲೆ ಬಿಡಿಸಲಾಗಿದೆ.
ಎ.ಎ.ವೃತ್ತದಲ್ಲಿ ಬೃಹತ್ ಮಂಟಪ ನಿರ್ಮಿಸಿ ಭಾರತ ಮಾತೆಯ ಪ್ರತಿಮೆ ಸ್ಥಾಪಿಸಲಾಗಿದೆ. ನೆಹರು ರಸ್ತೆಯಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಗೋಪಿ ವೃತ್ತದಲ್ಲಿ ಪಂಚ ಪರಿವರ್ತನಾ ಅಂಶಗಳ ಫ್ಲೆಕ್ಸ್, 30 ಅಡಿ ರಂಗೋಲೆ. ದುರ್ಗಿಗುಡಿಯಲ್ಲಿ ಮಹಾದ್ವಾರ, ಜೈಲ್ ವೃತ್ತದಲ್ಲಿ ಅಯೋಧ್ಯೆ, ಶ್ರೀರಾಮನ ಭಾವಚಿತ್ರ ಇರಿಸಿ ರಂಗೋಲೆ ಬಿಡಿಸಲಾಗಿದೆ. ಪಥ ಸಂಚಲನ ಸಾಗುವ ಮಾರ್ಗದುದ್ದಕ್ಕು ಫ್ಲೆಕ್ಸ್ ಹಾಕಲಾಗಿದೆ.
4 ಸಾವಿರ ಕೆ.ಜಿ. ಹೂವು
ಇನ್ನು, ಪಥ ಸಂಚಲನದಲ್ಲಿ ಭಾಗವಹಿಸುವ ಸ್ವಯಂ ಸೇವಕರ ಮೇಲೆ ಅಲ್ಲಲ್ಲಿ ಪುಷ್ಪವೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ 4 ಸಾವಿರ ಕೆ.ಜಿ. ಹೂವು ತರಿಸಲಾಗಿದೆ. ಹೂ ಬೊಕೆ ಶಾಪ್‌ನ ಗೋವಿಂದರಾಜು, ಅವರ ಪುತ್ರ ಕಿರಣ್ ಹೂವಿನ ವ್ಯವಸ್ಥೆ ಮಾಡಿದ್ದಾರೆ.



ಇದನ್ನೂ ಓದಿ » ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದಿನಾಂಕ ಪ್ರಕಟ, ನೀತಿ ಸಂಹಿತೆ ಜಾರಿ
Route March


