ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕುಟುಂಬದವರೆಲ್ಲ ಮೈಸೂರಿನ ಚರ್ಚ್‌ಗೆ ತೆರಳಿದ್ದ ಸಂದರ್ಭ ಶಿವಮೊಗ್ಗದ ಕೀರ್ತಿನಗರದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ. ಕೊಠಡಿಯ ವಾರ್ಡ್‌ರೋಬ್‌ನಲ್ಲಿದ್ದ ಚಿನ್ನಾಭರಣ, ವಾಚುಗಳು, ಕ್ಯಾಮರಾಗಳು ಕಳುವಾಗಿವೆ (Theft) ಎಂದು ಆರೋಪಿಸಲಾಗಿದೆ.
ಕೀರ್ತಿನಗರದಲ್ಲಿರುವ ಉದ್ಯಮಿ ಜೇಮ್ಸ್ ಸ್ಟೀವನ್, ಕುಟುಂಬ ಸಹಿತ ಮೈಸೂರಿನ ಡೋರನಹಳ್ಳಿಯ ಚರ್ಚ್‌ಗೆ ತೆರಳಿದ್ದರು. ಅಲ್ಲಿಂದ ವಾಪಾಸಾದಾಗ ಮನೆಯ ಗೇಟ್ ಮತ್ತು ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ವಾರ್ಡ್ ರೋಬ್‌ನಲ್ಲಿದ್ದ ₹45,000 ಮೌಲ್ಯದ 870 ಗ್ರಾಂನ ಬೆಳ್ಳಿ ವಸ್ತುಗಳು, ₹33,000 ಮೌಲ್ಯದ 7 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್, ₹10,000 ಮೌಲ್ಯದ ನಾಲ್ಕು ವಾಚುಗಳು, ಎರಡು ಸೋನಿ ಕ್ಯಾಮರಾಗಳು ಕಳುವಾಗಿವೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ನಿಯಂತ್ರಣ ತಪ್ಪಿದ ಖಾಸಗಿ ಬಸ್, ಮೂರು ಬೈಕುಗಳು ಜಖಂ
Theft
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






