ಶಿವಮೊಗ್ಗ: ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ‘ಕಾಯಕ ಸೇತು’ ವೆಬ್‌ಸೈಟ್ (Jobs Website) ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಬಗೆಯ ಉದ್ಯೋಗದ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯಲಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸಂಸದ ಬಿ.ವೈ.ರಾಘವೇಂದ್ರ ಕಾಯಕ ಸೇತು ವೆಬ್‌ಸೈಟ್ ಅನಾವರಣ ಮಾಡಿದರು. ಈ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಉದ್ಯೋಗಾಕಾಂಕ್ಷಿಗಳಿಗೆ ನೆರವು ನೀಡಲಾಗುತ್ತಿದೆ. ಇದು ಉದ್ಯೋಗ ಮತ್ತು ಉದ್ಯೋಗಿಗಳನ್ನು ಅರಸುವವರಿಗೆ ಅನುಕೂಲವಾಗಿದೆ. ಕಾಯಕ ಸೇತು ಹೇಗೆ ಕೆಲಸ ಮಾಡಲಿದೆ? ಇಲ್ಲಿದೆ ಅದರ ಮಾಹಿತಿ.
ಕಾಯಕ ಸೇತು ಬಳಸೋದು ಹೇಗೆ?
ಉದ್ಯೋಗಾಕಾಂಕ್ಷಿಗಳು https://www.kayakasetu.com ವೆಬ್‌ಸೈಟ್‌ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಇನ್ನು ಪ್ರತಿ ಬಾರಿ ಲಾಗಿನ್ ಮಾಡಲು ಜಿ ಮೇಲ್ ಮತ್ತು ಪಾಸ್ ವರ್ಡ್ ಬಳಕೆ ಮಾಡಬೇಕು.
ರಿಜಿಸ್ಟರ್ ಆದ ಮೇಲೆ ಸ್ವ ವಿವರ ಅಪ್‌ಲೋಡ್ ಮಾಡಬೇಕು. ಇದರಲ್ಲಿ ಶೈಕ್ಷಣಿಕ ಮಾಹಿತಿ, ಕೌಶಲ್ಯದ ಕುರಿತು ಸಂಪೂರ್ಣ ಮಾಹಿತಿ ಇರಬೇಕು. ಈ ಮಾಹಿತಿಗಳನ್ನು AI ತಂತ್ರಾಂಶದ ಮೂಲಕ ಉದ್ಯೋಗದಾತರಿಗೆ ತಲುಪಿಸಲಾಗುತ್ತದೆ.

ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ, ಸ್ಕಿಲ್ ಆಧಾರದಲ್ಲಿ ಲಭ್ಯವಿರುವ ಉದ್ಯೋಗಗಳನ್ನು ವೀಕ್ಷಿಸಿ, ಅರ್ಜಿ ಸಲ್ಲಿಸಬಹುದಾಗಿದೆ.
ಶಿವಮೊಗ್ಗ ಜಿಲ್ಲೆಯ ಸಣ್ಣ ಸಂಸ್ಥೆಗಳಿಂದ ಕಾರ್ಖಾನೆಗಳ ತನಕ ಎಲ್ಲ ಬಗೆಯ ಉದ್ಯೋಗಗಳು ಬೆರಳ ತುದಿಯಲ್ಲೆ ದೊರೆಯಲಿದೆ. ಡಾ. ಧನಂಜಯ ಸರ್ಜಿ ಅವರ ಶಾಸಕರ ಕಚೇರಿಯಿಂದಲೆ ಈ ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ.
ಡಾ. ಧನಂಜಯ ಸರ್ಜಿ ಹೇಳಿದ್ದೇನು?
ವೆಬ್‌ಸೈಟ್ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಇದು ಉಚಿತ ವೆಬ್‌ಸೈಟ್. ಉದ್ಯೋಗ ನೀಡುವವರು, ಉದ್ಯೋಗ ಬಯಸುವವರಿಗೆ ಸೇತುವೆಯಾಗಿ ಕೆಲಸ ಮಾಡುತ್ತದೆ. ವೆಬ್‌ಸೈಟ್‌ನಲ್ಲಿ ಯಾವೆಲ್ಲ ಉದ್ಯೋಗಗಳಿವೆ. ಅವುಗಳಿಗೆ ಅರ್ಹತೆಗಳೇನು, ಮಾನದಂಡವೇನು ಎಂಬ ಅಂಶಗಳಿರುತ್ತವೆ. ಉದ್ಯೋಗಾಕಾಂಕ್ಷಿಗಳು CV ಅಪ್‌ಲೋಡ್ ಮಾಡುತ್ತಿದ್ದಂತೆ ಎಐ ಮೂಲಕ ವಿಶ್ಲೇಷಣೆ ಮಾಡಲಾಗುತ್ತದೆ. ಹತ್ತು ಮಾನದಂಡಗಳಲ್ಲಿ ಎಷ್ಟಕ್ಕೆ ಅರ್ಹತೆ ಇದೆ ಎಂದು ಅದು ತಿಳಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಉದ್ಯೋಗವಕಾಶ ಹೆಚ್ಚಿಸಲು ವೆಬ್‌ಸೈಟ್ ಆರಂಭಿಸಲಾಗಿದೆ. ವೈದ್ಯಕೀಯ, ಫೌಂಡ್ರಿ, ಏಜೆನ್ಸಿ, ಕಾಲೇಜು ಸೇರಿದಂತೆ ಯಾವುದೆ ಉದ್ಯೋಗವಾದರು ಅದಕ್ಕೆ ಇಲ್ಲಿ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳಿಗೆ ಹಂತ ಹಂತವಾಗಿ ಕೌಶಲ್ಯ ಅಭಿವೃದ್ಧಿ ಮಾಡುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಇದನ್ನೂ ಓದಿ » ‘ನಿಮ್ಮನ್ನು ಅರೆಸ್ಟ್ ಮಾಡ್ತೀವಿ’, ನಿಮಗು ಬರಬಹುದು ಇಂತಹ ಫೋನ್ ಕರೆ, ಶಿವಮೊಗ್ಗದ ಶಿಕ್ಷಕಿ ಮಾಡಿದ್ದೇನು?
LATEST NEWS
- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

About The Editor
ನಿತಿನ್ ಆರ್.ಕೈದೊಟ್ಲು




