ರಸ್ತೆ ರಿಪೇರಿ ಎಫಕ್ಟ್‌, ಆರು ಗಂಟೆಯಿಂದ ಆನ್‌ಲೋಡ್‌ ಆಗದೆ ನಿಂತಲ್ಲೆ ನಿಂತ ಗೂಡ್ಸ್‌ ರೈಲು

ಶಿವಮೊಗ್ಗ: ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಬಳಿ ರಿಪೇರಿ ಕಾಮಗಾರಿ ರೈಲ್ವೆ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆರು ಗಂಟೆಗು ಹೆಚ್ಚು ಹೊತ್ತಿನಿಂದ ಗೂಡ್ಸ್‌ ರೈಲು (Goods Train) ಅನ್‌ ಲೋಡ್‌ ಆಗದೆ ನಿಂತಲ್ಲಿಯೇ ನಿಲ್ಲುವಂತಾಗಿದೆ. (ಈ ಸುದ್ದಿಯನ್ನು ಇನ್ನು 45 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರೈಲ್ವೆ ನಿಲ್ದಾಣದಲ್ಲಿ ಕೊನೆಯ ಪ್ಲಾಟ್‌ ಫಾರಂ ಅನ್ನು ಗೂಡ್ಸ್‌ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗೂಡ್ಸ್‌ ರೈಲುಗಳ ಬಳಿ ಲಾರಿಗಳು ತೆರಳಲು ಅನುವಾಗುವಂತೆ ಸಂರ್ಪಕ ರಸ್ತೆಯನ್ನು ನಿರ್ಮಿಸಲಾಗಿದೆ. ಶಾಂತಿನಗರ ಕ್ರಾಸ್‌ ಬಳಿ ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಪಕ್ಕದಿಂದ ಲಾರಿಗಳು ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸುವತ್ತವೆ. ಈಗ ಸಂಪರ್ಕ ರಸ್ತೆ ಅಗೆದಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾಗಿ ಲಾರಿಗಳು ರೈಲ್ವೆ ನಿಲ್ದಾಣದೊಳಗೆ ತಲುಪಲು ಆಗದಂತಾಗಿದೆ.

ಇಂದು ಬೆಳಗ್ಗೆ ರಸಗೊಬ್ಬರದ ಲೋಡ್‌ ಹೊತ್ತು ಗೂಡ್ಸ್‌ ರೈಲು ಆಗಮಿಸಿದ್ದು, ಅನ್‌ಲೋಡ್‌ ಮಾಡುವುದು ಕಷ್ಟವಾಗಿದೆ. ಶಿವಮೊಗ್ಗಕ್ಕೆ ಪ್ರತಿ ತಿಂಗಳು ಕನಿಷ್ಠ 20 ದಿನವಾದರು ಗೂಡ್ಸ್‌ ರೈಲುಗಳು ಆಗಮಿಸುತ್ತವೆ. ಸಾಮಾನ್ಯವಾಗಿ ಅಕ್ಕಿ, ಜೋಳ, ಗೊಬ್ಬರ ಹೊತ್ತು ತರುತ್ತವೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

Goods-Train-Stopped-in-Shimoga-Railway-station.

Goods-Train-Stopped-in-Shimoga-Railway-station.

ಇದನ್ನೂ ಓದಿ » ಇಡ್ಲಿ ಗಾಡಿಯಲ್ಲಿ ಗ್ರಾಹಕ ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ₹1,00,000 ಹಣ, ಮುಂದೇನಾಯ್ತು?

Goods Train

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Goods-Train-Stopped-in-Shimoga-Railway-station.

Leave a Comment