ಊರಿಗೆ ಹೋಗಿದ್ದಾಗ ಪಕ್ಕದ ಮನೆ ಮಹಿಳೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

ಶಿವಮೊಗ್ಗ: ಕುಟುಂಬದವರು ಊರಿಗೆ ಹೋಗಿದ್ದಾಗ ಮನೆ ಬಾಗಿಲಿನ ಲಾಕ್‌ ಮೀಟಿ ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಡಿ ಬ್ಲಾಕ್‌ನಲ್ಲಿರುವ ದಿನೇಶ್‌ ಕುಮಾರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.

ದಿನೇಶ್‌ ಕುಮಾರ್‌ ಮತ್ತು ಅವರ ಪೋಷಕರು ಸಾಗರದ ತಮ್ಮೂರಿಗೆ ತೆರಳಿದ್ದರು. ಪಕ್ಕದ ಮನೆಯ ಮಹಿಳೆ ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೆ ದಿನೇಶ್‌ ಕುಮಾರ್‌ ಮನೆಗೆ ಮರಳಿದ್ದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನ ಆಗಿರುವುದು ಗೊತ್ತಾಗಿದೆ.

ಇದನ್ನೂ ಓದಿ » ಬಿಹಾರ ಫಲಿತಾಂಶ, ಶಿವಮೊಗ್ಗದಲ್ಲಿ ಯಡಿಯೂರಪ್ಪ, ರಾಘವೇಂದ್ರ ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಬಾಗಿಲಿನ ಲಾಕ್‌ ಮುರಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಲಕ್ಷ್ಮಿ ಕಾಸು, ಉಂಗುರಗಳು ಸೇರಿದ ₹45,000 ಮೌಲ್ಯದ ಆಭರಣಗಳು, ₹45,000 ನಗದು, ₹1200 ಮೌಲ್ಯದ ಬೆಳ್ಳಿ ಉಡುದಾರವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 14, 2025 at 5:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 14, 2025

Leave a Comment