‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಸರ್ಕಾರದ ಅನುದಾನದಲ್ಲಿ ನಿರ್ಮಿಸಿ, ಮಹಾನಗರ ಪಾಲಿಕಗೆ ಹಸ್ತಾಂತರವಾದ ನಗರದ ಹಲವು ವಾಣಿಜ್ಯ ಸಂಕೀರ್ಣಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ. ಅದರಿಂದ ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬೇಕಿದ್ದ ಕೋಟ್ಯಂತರ ರುಪಾಯಿ (11.51 crore Loss) ನಷ್ಟವಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಆರೋಪಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತೇಶ್‌, ಮಳಿಗೆಗಳ ಹಸ್ತಾಂತರವಾಗದೆ ಪಾಲಿಕೆಗೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ಆರೋಪಿಸಿದರು.

ಕಾಂತೇಶ್‌ ಏನೇನು ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

ಪಾಯಿಂಟ್‌ 1: ಶಿವಪ್ಪನಾಯಕ ಹೂವಿನ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ, ಗಾಂಧಿನಗರ ವಾಣಿಜ್ಯ ಸಂಕೀರ್ಣ ಹಸ್ತಾಂತರವಾಗಿ 2 ವರ್ಷ ಕಳೆದಿವೆ. ಗಾರ್ಡನ್ ಏರಿಯಾದಲ್ಲಿನ ವಾಣಿಜ್ಯ ಸಂಕೀರ್ಣ ಹಸ್ತಾಂತರವಾಗಿ 5 ವರ್ಷವಾಗಿದೆ. ಇವುಗಳಲ್ಲಿನ ಒಟ್ಟು 229 ಮಳಿಗೆಗಳ ಬಾಡಿಗೆ ಮತ್ತು ಮುಂಗಡ ಹಣದಿಂದ ಅಂದಾಜು ₹11.51 ಕೋಟಿ ಆದಾಯ ಬರುತ್ತಿತ್ತು.

ಇದನ್ನೂ ಓದಿ » ಗ್ಯಾರಂಟಿ ಯೋಜನೆಗಳು ಚುನಾವಣೆ ಲಕ್ಷ್ಮಿ, ಶಿವಮೊಗ್ಗದಲ್ಲಿ ವಿಜಯೇಂದ್ರ ವಿಶ್ಲೇಷಣೆ, ಏನಿದು?

ಪಾಯಿಂಟ್‌ 2: ಮಳಿಗೆಗಳನ್ನು ಹಂಚಿಕೆ ಮಾಡದ ಕಾರಣ ಪಾಲಿಕೆಗೆ ನಷ್ಟವಾಗಿದೆ. ಖಾಸಗಿ ಬಸ್‌ ನಿಲ್ದಾಣ ಪಕ್ಕದ ಕಟ್ಟಡ ನಿರ್ಮಾಣವೂ ಪೂರ್ಣವಾಗಿದೆ. ಅವುಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ಹಸ್ತಾಂತರಿಸಿಲ್ಲ.

ke-kantesh-ks-eshwarappa-son

ಪಾಯಿಂಟ್‌ 3: ಮಹಾನಗರ ಪಾಲಿಕೆ ಕೂಡಲೆ ಈ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಜನವರಿ 2ರಂದು ರಾಷ್ಟ್ರಭಕ್ತರ ಬಳಗ ಪಾಲಿಕೆಗೆ ಮುತ್ತಿಗೆ ಹಾಕುವ ಜತೆಗೆ ಅಹೋರಾತ್ರಿ ಧರಣಿ ನಡೆಸಲಿದೆ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು.

ಪಾಲಿಕೆ ಇ-ಸ್ವತ್ತು ನೀಡುವಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಏಜೆಂಟರ್ ಗಳ ಮೂಲಕ ಹೋದವರಿಗೆ ಮಾತ್ರ ಇ-ಸ್ವತ್ತು ಸಿಗುತ್ತದೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆಯಾಗಬೇಕು. ಬಡವರಿಗೆ ಆಶ್ರಯ ಯೋಜನೆಯಡಿ ಮನೆ ಹಂಚಿಕೆ ಸರಿಯಾಗಿ ಆಗಿಲ್ಲ. ನಗರದ ರಸ್ತೆಗಳು ಗುಂಡಿಯಿಂದ ತುಂಬಿವೆ. ಕುಡಿಯುವ ನೀರು, ಬೀದಿ ನಾಯಿಗಳ ಸಮಸ್ಯೆಯೂ ಇದೆ. ಈ ಎಲ್ಲವನ್ನು ಬಗೆಹರಿಸಲು ಪಾಲಿಕೆ ಆಡಳಿತ ಮುಂದಾಗಬೇಕು.ಕೆ.ಈ.ಕಾಂತೇಶ್‌, ರಾಷ್ಟ್ರಭಕ್ತರ ಬಳಗದ ಮುಖಂಡ

ಮೋಹನ್ ಜಾದವ್, ಸುವರ್ಣಾ ಶಂಕರ್, ರಾಜಣ್ಣ, ಆ.ಮ. ಪ್ರಕಾಶ್, ಶಂಕ್ರಾನಾಯ್ಕ, ಕುಬೇರಪ್ಪ, ನಾಗರಾಜ್ ಮತ್ತಿತರರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment