ಕಾಡು ಹಂದಿಯ ಮಾಂಸ ಸಹಿತ ಅರೋಪಿ ಅರೆಸ್ಟ್‌

 ಶಿವಮೊಗ್ಗ  LIVE 

ಶಿವಮೊಗ್ಗ: ತಾಲೂಕಿನ ಬಾಳೆಕೊಪ್ಪದ ಜಮೀನಿನಲ್ಲಿ ಕಾಡುಹಂದಿಯನ್ನು (wild boar) ಬೇಟೆ ಮಾಡಿ ಮಾಂಸ ಮಾಡುತ್ತಿದ್ದವರನ್ನು ಆಯನೂರು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಾಳೆಕೊಪ್ಪದ ಕೃಷ್ಣ, ಶಿವು, ಹುಚ್ಚರಾಯ, ರವಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಸುಮಾರು 64 ಕೆ.ಜಿ ಮಾಂಸ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ » ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಕು ಇರಿತ ಕೇಸ್‌, ಮೂವರು ಅರೆಸ್ಟ್‌, ಏನಿದು ಪ್ರಕರಣ?

ಆರೋಪಿ ಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಎಫ್‌ ಅಜ್ಜಯ್ಯ, ಎಸಿಎಫ್‌ ವಿಜಯ್ ಗಿರಿತಮ್ಮಣ್ಣ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ವಿನೋದ್‌ ಅಂಗಡಿ, ಡಿವೈಆರ್‌ಎಫ್‌ಒ ಕಿರಣ್ ಕುಮಾ‌ರ್, ಬೀಟ್‌ ಫಾರೆಸ್ಟ್ ಮಂಜುನಾಥ್, ಕಚೇರಿ ಡಿವೈಆರ್‌ಎಫ್‌ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment