ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ, ಯಾವಾಗ? ಯಾರೆಲ್ಲ ಸ್ಪರ್ಧಿಸಬಹುದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026ರ ಅಂಗವಾಗಿ ಕೃಷಿ ಇಲಾಖೆಯಿಂದ ಜನವರಿ 6ರಂದು ಬೆಳಗ್ಗೆ 11ಕ್ಕೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ (Millet) ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಅದಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯ ಜತೆಗೆ ಅರ್ಜಿಯನ್ನು ಡಿ.31ರ ಒಳಗೆ ಇ-ಮೇಲ್ ವಿಳಾಸ dagrshi@gmail.com ಅಥವಾ ಖುದ್ದಾಗಿ, ಪೋಸ್ಟ್ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೆ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ. ಈ ವಿಳಾಸಕ್ಕೆ ಕಳುಹಿಸಬೇಕು ಅಥವಾ https://docs.google.com/forms/d/e/1FAlpQLSft0YCOBsqvFU_hXl5cpvHpzSCjxl5_EQrxiwRtnuO5dGWTg/viewform ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಪ್ರತಿ ಸ್ಪರ್ಧೆಗೆ ಸಿರಿಧಾನ್ಯದ ಒಂದು ಸಿಹಿ ಅಥವಾ ಖಾರದ ತಿನಿಸು ಅಥವಾ ಒಂದು ಮರೆತು ಹೋದ ಖಾದ್ಯ (ಸಸ್ಯಹಾರಿ ತಿನಿಸು ಮಾತ್ರ) ತಯಾರಿಸಬೇಕು. ಅರ್ಜಿಯಲ್ಲಿ ತಿಳಿಸಿದ ತಿನಿಸುಗಳನ್ನು ಮನೆಯಲ್ಲಿಯೆ ತಯಾರಿಸಿ ಪಾಕ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪ್ರದರ್ಶಿಸಬೇಕು. ವಿಜೇತರಿಗೆ ಪ್ರಥಮ ಬಹುಮಾನ ₹5,000., ₹3,000., ₹2,000 ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ, ದೂ.08182-222635ಗೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment