ಶಿವಮೊಗ್ಗ LIVE
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ನೂತನ ವೇಳಾಪಟ್ಟಿ ಪ್ರಕಟಿಸಿದೆ. ಜನವರಿ 1ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ. ಅದರಂತೆ ಶಿವಮೊಗ್ಗದ ಕೆಲವು ರೈಲುಗಳ (Shivamogga trains) ಪ್ರಯಾಣ ಅವಧಿ ಕಡಿತವಾಗಲಿದೆ. ನಿಗದಿಗಿಂತಲು ಕೆಲವು ನಿಮಿಷ ಬೇಗ ನಿಲ್ದಾಣಗಳನ್ನು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ರೈಲು? ಏನೇನು ಬದಲಾವಣೆ?
» ರೈಲಿನ ಟೈಮ್ ಟೇಬಲ್ ಬದಲು
ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) – ಈವರೆಗು ಸೋಮವಾರ, ಬುಧವಾರ, ಶನಿವಾರ ಚಲಿಸುತ್ತಿತ್ತು. ಇನ್ಮುಂದೆ ಮಂಗಳವಾರ, ಗುರುವಾರ, ಭಾನುವಾರ ಸಂಚರಿಸಲಿದೆ. ಜನವರಿ 1ರಿಂದ ಜಾರಿಗೆ ಬರಲಿದೆ.
ರೈಲುಗಳ ಪ್ರಯಾಣ ಅವಧಿ ಕಡಿತ
ನೈಋತ್ಯ ರೈಲ್ವೆ ವ್ಯಾಪ್ತಿಯ 123 ರೈಲುಗಳು ಸ್ಪೀಡ್ ಆಗಲಿವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಗೆ ಸೇರಿದ ರೈಲುಗಳು ಇವೆ. ಅವುಗಳ ಪಟ್ಟಿ ಇಲ್ಲಿದೆ.

» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) : ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ಕಡಿತವಾಗಲಿದೆ. ಈವರೆಗು 6 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 5 ಗಂಟೆ 45 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.
» ಎಂಜಿಆರ್ ಚೆನ್ನೈ – ಶಿವಮೊಗ್ಗ (ರೈಲು ಸಂಖ್ಯೆ 12691): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 12 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 12 ಗಂಟೆ 30 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.
ಇದನ್ನೂ ಓದಿ » ಶಿವಮೊಗ್ಗದ ಎರಡು ಎಕ್ಸ್‌ಪ್ರೆಸ್ ರೈಲುಗಳು ಇನ್ಮುಂದೆ ಸೂಪರ್ ಫಾಸ್ಟ್ ರೈಲುಗಳು, ಯಾವ್ಯಾವ ರೈಲು?
» ಶಿವಮೊಗ್ಗ – ಯಶವಂತಪುರ (ರೈಲು ಸಂಖ್ಯೆ 16582): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 15 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 5 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.
» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 20689 (16579)): ಜನವರಿ 1 ರಿಂದ ಈ ರೈಲು 10 ನಿಮಿಷ ಸ್ಪೀಡ್ ಆಗಲಿವೆ. ಈವರೆಗು 5 ಗಂಟೆ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.
» ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089): ಜನವರಿ 1 ರಿಂದ ಈ ರೈಲು 5 ನಿಮಿಷ ಸ್ಪೀಡ್ ಆಗಲಿವೆ. ಈವರೆಗು 4 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 20 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ. (Shivamogga Trains)
» ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227): ಜನವರಿ 1 ರಿಂದ ಈ ರೈಲು 10 ಮುಂಚಿತವಾಗಿ ನಿಗದಿತ ನಿಲ್ದಾಣ ತಲುಪಲಿದೆ. ಈವರೆಗು ಪ್ರಯಾಣದ ಅವಧಿ 12 ಗಂಟೆ 20 ನಿಮಿಷ ಇತ್ತು. ಇನ್ಮುಂದೆ 12 ಗಂಟೆ 10 ನಿಮಿಷದಲ್ಲಿ ಪ್ರಯಾಣ ಮುಗಿಸಲಿದೆ.
LATEST NEWS
- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

About The Editor
ನಿತಿನ್ ಆರ್.ಕೈದೊಟ್ಲು





