ಶಿವಮೊಗ್ಗದಲ್ಲಿ ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು?

 ಶಿವಮೊಗ್ಗ  LIVE 

ಶಿವಮೊಗ್ಗ: ಹೊಸ ವರ್ಷವನ್ನು (New Year) ಶಿವಮೊಗ್ಗದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ, ಹಾಡು, ಡಾನ್ಸು, ಪಾರ್ಟಿಗಳ ಮೂಲಕ ನೂತನ ಕ್ಯಾಲೆಂಡರ್‌ ವರ್ಷಕ್ಕೆ ಅದ್ಧೂರಿ ವೆಲ್‌ಕಮ್‌ ನೀಡಲಾಯಿತು.

New-Year-Celebration-in-Shivamogga-city

ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?

ಕ್ಲಬ್‌, ಹೋಂ ಸ್ಟೇ, ಪಾರ್ಟಿ ಹಾಲ್:‌ ಶಿವಮೊಗ್ಗ ನಗರದ ಎಲ್ಲ ಕ್ಲಬ್‌ಗಳಲ್ಲು ರಾತ್ರಿ ಔತಣಕೂಟ, ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಡಿಸೆಂಬರ್‌ 31ರ ಸಂಜೆ 7 ಗಂಟೆಯಿಂದಲೇ ಎಲ್ಲೆಡೆ ಹಾಡು, ಡಾನ್ಸು, ಪಾರ್ಟಿಗಳು ಆರಂಭವಾಗಿದ್ದವು. 12 ಗಂಟೆಯಾಗುತ್ತಿದ್ದಂತೆ ಸಂಭ್ರಮಾಚರಣೆ ಜೋರಾಯಿತು. ಪೊಲೀಸ್‌ ಇಲಾಖೆ ಈ ಮೊದಲೆ ಸೂಚನೆ ನೀಡಿದ್ದರಿಂದ 12.30ರ ಹೊತ್ತಿಗೆ ಪಾರ್ಟಿಗಳನ್ನು ಬಂದ್‌ ಮಾಡಲಾಯಿತು.

ಪಟಾಕಿ ಸಿಡಿಸಿ ಸಂಭ್ರಮ: ಕ್ಲಬ್‌, ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಲಾಯಿತು. ಇತ್ತ ಮನೆಗಳಲ್ಲು ಜನರ ಸಂಭ್ರಮಾಚರಣೆ ಮಾಡಿದರು. ರಾತ್ರಿ ಕೇಕ್‌ ಕತ್ತರಿಸಿ ಖುಷಿಪಟ್ಟರು. ನಗರದ ಹಲವೆಡೆ ರಾತ್ರಿ ಪಟಾಕಿ ಸಿಡಿಸಿ ಜನರು ನೂತನ ವರ್ಷನ್ನು ಖುಷಿಯಿಂದ ಸ್ವಾಗತಿಸಿದರು.

c1

ಪೊಲೀಸರಿಂದ ಸಂಭ್ರಮಾಚರಣೆ: ಬಂದೋಬಸ್ತ್‌ ಡ್ಯೂಟಿಯಲ್ಲಿದ್ದ ಪೊಲೀಸರು ರಾತ್ರಿ 12 ಗಂಟೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ರಾತ್ರಿ ಕೇಕ್‌ ಕತ್ತರಿಸಿದ ಪೊಲೀಸರು ಕೇಕ್‌ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.

New Year-Celebration-in-Shivamogga-city

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಜನವರಿ 1ರ TOP NEWS, ಓದಲು ಇಲ್ಲಿ ಕ್ಲಿಕ್‌ ಮಾಡಿ

ಚರ್ಚ್‌ನಲ್ಲಿ ಮಿಡ್‌ ನೈಟ್‌ ಪ್ರಾರ್ಥನೆ: ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗದ ಎಲ್ಲ ಚರ್ಚ್‌ಗಳಲ್ಲಿಯು ಪ್ರಾರ್ಥನೆ ನೆರವೇರಿತು. ನೂತನ ವರ್ಷ ಎಲ್ಲರಿಗು ಶುಭ ತರಲಿ ಎಂದು ಪ್ರಾರ್ಥನೆ ಮಾಡಲಾಯಿತು. ನ್ಯೂ ಇಯರ್‌ ಹಿನ್ನೆಲೆ ಚರ್ಚ್‌ಗಳಿಗೆ ವಿದ್ಯು ದೀಪಾಲಂಕಾರ ಮಾಡಲಾಗಿತ್ತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment